ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಕಲೆ ಮರೆಯಾಗುತ್ತಿದೆ: ಡಾ.ಸಿ.ಸೋಮಶೇಖರ್

ಭ್ರಮರಿ ಡಾನ್ಸ್ ರೆಪರ್ಟರಿಯ ದ್ವಿದಶ ವಾರ್ಷಿಕೋತ್ಸವ
Last Updated 3 ಸೆಪ್ಟೆಂಬರ್ 2022, 21:34 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂತರ ಶಾಲಾ ಮತ್ತು ಕಾಲೇಜು ಸ್ಪರ್ಧೆಗಳಲ್ಲಿ ದೇಸಿ ಕಲೆಗಳ ಸ್ಪರ್ಧೆ ಕಡಿಮೆ ಆಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಆತಂಕ ವ್ಯಕ್ತಪಡಿಸಿದರು.

ಭ್ರಮರಿ ಡಾನ್ಸ್ರೆಪರ್ಟರಿಯ ದ್ವಿದಶ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಹೊಸ ತಲೆಮಾರಿನ ವಿದ್ಯಾರ್ಥಿಗಳ ಆಲೋಚನೆ ಮತ್ತು ಅಭಿರುಚಿ ಪಾಶ್ಚಾತ್ಯಗೊಳ್ಳುತ್ತಿದೆ. ದೇಸಿ ನೃತ್ಯ, ಗೀತೆ ಹಾಗೂ ಕಲೆಗಳಿಗೆ ಒತ್ತು ದೊರೆಯದಾಗಿರುವುದು ದುರಂತ’ ಎಂದು ಹೇಳಿದರು.

‘ಪ್ರತಿಯೊಬ್ಬರೂ ಕಲೆಯನ್ನು ಆಸ್ವಾದಿಸುವ ಪ್ರವೃತ್ತಿ ಬೆಳಸಿಕೊಳ್ಳಬೇಕು. ವೃತ್ತಿ ಜೀವನದಲ್ಲಿ ಎಷ್ಟೇ ಸಂಪತ್ತು ಮತ್ತು ಹಣ ಸಂಪಾದಿಸಿದರೂ ಜೀವನದಲ್ಲಿ ನೆಮ್ಮದಿ ಕಾಣಲು ಕಲೆ, ಸಾಹಿತ್ಯ, ಸಂಗೀತ ಆಸ್ವಾದಿಸುವುದು ಮುಖ್ಯ. ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಖುಷಿ ನೀಡಲಿದೆ’ ಎಂದು ಅಭಿಪ್ರಾಯಪಟ್ಟರು.

ಭಾನುಮತಿ ನೃತ್ಯ ಕಲಾ ಮಂದಿರಮ್ ನಿರ್ದೇಶಕಿ ಶೀಲಾ ಚಂದ್ರಶೇಖರ್ ಮಾತನಾಡಿ, ‘ಪಾಶ್ಚಾತ್ಯ ಸಂಸೃತಿ, ಕಲೆ ಮತ್ತು ಸಂಗೀತಕ್ಕೆ ಮನಸೋಲುತ್ತಿರುವ ಯುವ ಪೀಳಿಗೆಗೆ ದೇಸಿ ಸಂಗೀತ ಹೇಳಿಕೊಡುತ್ತಿರುವ ಭ್ರಮರಿ ಡಾನ್ಸ್ ಸಂಸ್ಥೆಯ ಕಾರ್ಯ ಪ್ರಶಂಸನೀಯ’ ಎಂದರು. ಸಂಸ್ಥೆಯ ಹಲವು ವಿದ್ಯಾರ್ಥಿಗಳು ಹತ್ತಾರು ಗೀತೆಗಳಿಗೆ ಆಕರ್ಷಕವಾಗಿ ನೃತ್ಯ ಪ್ರದರ್ಶಿಸಿದರು. ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಭ್ರಮರಿ ಡಾನ್ಸ್ ರೆಪರ್ಟರಿ ಸಂಸ್ಥೆಯ ನಿರ್ದೇಶಕಿ ಸ್ನೇಹಾ ಕಪ್ಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT