ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಬೇಡಿ: ಕಂಬಾರ

7

ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಬೇಡಿ: ಕಂಬಾರ

Published:
Updated:

ಬೆಂಗಳೂರು: ‘ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದವರು, ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋಗದೆ, ಇಲ್ಲಿಯೇ ಉದ್ಯೋಗ, ಸಂಶೋಧನೆ ಕೈಗೊಂಡು ದೇಶಸೇವೆಗೆ ಮುಂದಾಗಬೇಕು’ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕಲಾ ನಿಕಾಯದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮೂರು ದಿನಗಳ ‘ಓರಿಯಂಟೇಷನ್‌ ಕಾರ್ಯಕ್ರಮ’ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಉನ್ನತ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಅದರ ಉಪಯೋಗ ಪಡೆದವರು ಅಮೆರಿಕಕ್ಕೆ ತೆರಳಿ ಕ್ಲರ್ಕ್‌ ಕೆಲಸಕ್ಕೆ ಸೇರುತ್ತಾರೆ. ಕಲಿತ ವಿದ್ಯೆಗೆ ಅನುಗುಣವಾದ ಉದ್ಯೋಗವನ್ನು ಇಲ್ಲೇ ಕಂಡುಕೊಂಡು ದೇಶಕ್ಕೆ ಒಳ್ಳೆ ಹೆಸರು ತನ್ನಿ’ ಎಂದರು.

ವನ್ಯಜೀವಿ ಛಾಯಾಗ್ರಾಹಕ ಸೇನಾನಿ, ‘ವಿದ್ಯಾರ್ಥಿಗಳು ಪಠ್ಯಕ್ಕೆ ಮಾತ್ರ ಸೀಮಿತ ವಾಗಬಾರದು. ಪಠ್ಯೇತರ ಪುಸ್ತಕಗಳನ್ನು ಓದಬೇಕು. ಪರಿಸರವನ್ನು ಅರ್ಥಮಾಡಿಕೊಳ್ಳಲು ಯತ್ನಿಸಬೇಕು’ ಎಂದರು.

‘ತರಗತಿಗಳ ಅಧ್ಯಯನಕ್ಕಿಂತ ಹೊರತಾದ ಓದು, ಸುತ್ತಾಟವನ್ನು ರೂಢಿಸಿಕೊಳ್ಳಬೇಕು’ ಎಂದು ಮತ್ತೊಬ್ಬ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ತಿಳಿಸಿದರು.

‘ಮುಂದಿನ 10 ವರ್ಷಗಳಲ್ಲಿ ಎದು ರಾಗುವ ಸವಾಲುಗಳನ್ನು ಎದುರಿಸಲು ಬೇಕಾದ ವಸ್ತುವಿಷಯವುಳ್ಳ ಪಠ್ಯವನ್ನು ರೂಪಿಸಿದ್ದೇವೆ. ಅದರ ಸದುಪಯೋಗ ಮಾಡಿಕೊಳ್ಳಿ’ ಎಂದು ಕುಲಪತಿ ಎಸ್‌.ಜಾಫೆಟ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 3

  Sad
 • 1

  Frustrated
 • 9

  Angry

Comments:

0 comments

Write the first review for this !