‘ಅಗ್ಗದ ದರದಲ್ಲಿ ಚಿಕಿತ್ಸೆ ನೀಡಿ’

7

‘ಅಗ್ಗದ ದರದಲ್ಲಿ ಚಿಕಿತ್ಸೆ ನೀಡಿ’

Published:
Updated:
ವೈದ್ಯರ ದಿನಾಚರಣೆ ಅಂಗವಾಗಿ ಶ್ರೀಲಕ್ಷ್ಮಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಭಾನುವಾರ ಆಯೋಜಿಸಿದ್ದ ‘ಕಿಡ್ನಿ ದಾನ ಮಾಡಿ ಜೀವ ಉಳಿಸಿ’ ಕಾಲ್ನಡಿಗೆ ಜಾಥ ಕಾರ್ಯಕ್ರಮಕ್ಕೆ ಶಾಸಕ ಬೈರತಿ ಬಸವರಾಜು ಚಾಲನೆ ನೀಡಿದರು. ಜಂಟಿ ಆಯುಕ್ತೆ ವಾಸಂತಿ ಅಮರ್, ಪಾಲಿಕೆ ಸದಸ್ಯ ಎಸ್.ಜಿ.ನಾಗರಾಜ, ಅಂಥೋನಿಸ್ವಾಮಿ ಡಾ.ಸಂಭಾಶಿವ ಇದ್ದರು 

ಬೆಂಗಳೂರು: ‘ಸಮಾಜದಲ್ಲಿ ವೈದ್ಯರ ಪಾತ್ರ ಮಹತ್ವದಾಗಿದ್ದು, ಖಾಸಗಿ ಆಸ್ಪತ್ರೆಗಳು ಬಂಡವಾಳ ನಿರೀಕ್ಷಿಸದೆ ಬಡವರಿಗೆ ಅಗ್ಗದ ದರದಲ್ಲಿ ಚಿಕಿತ್ಸೆ ನೀಡಿ ಸಾಮಾಜಿಕ ಕಳಕಳಿಗೆ ಮುಂದಾಗಬೇಕು’ ಎಂದು ಶಾಸಕ ಭೈರತಿ ಬಸವರಾಜ ಹೇಳಿದರು.

ವೈದ್ಯರ ದಿನಾಚರಣೆ ಅಂಗವಾಗಿ ಶ್ರೀಲಕ್ಷ್ಮಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಭಾನುವಾರ ಆಯೋಜಿಸಿದ್ದ ‘ಕಿಡ್ನಿ ದಾನ ಮಾಡಿ ಜೀವ ಉಳಿಸಿ’ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

‘ಕೆ.ಆರ್.ಪುರದಲ್ಲಿ ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿರುವುದರಿಂದ ದುಬಾರಿ ವೆಚ್ಚ ಭರಿಸಿ ಚಿಕಿತ್ಸೆ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಡರೋಗಿಗಳಿಗೆ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಬೇಕು’ಎಂದು ಮನವಿ ಮಾಡಿದರು.

‘ದೇಶದಲ್ಲಿ ಮಧುಮೇಹ ರೋಗ ಹೆಚ್ಚಾಗಿ ಕಂಡು ಬರುತ್ತಿದೆ. ಸಾಂಕ್ರಮಿಕ ರೋಗದಂತೆ ಮಧುಮೇಹ ಹರಡುತ್ತಿದೆ. ಈ ಕಾಯಿಲೆಯಿಂದಾಗಿ ಕಿಡ್ನಿ,
ಹೃದಯ ಸಂಬಂಧಿ ಕಾಯಿಲೆಗಳು, ಕಣ್ಣಿನ ಸಮಸ್ಯೆ ಹೆಚ್ಚಾಗುತ್ತವೆ. ನಮ್ಮ ಜೀವನ ಶೈಲಿ,ಆಹಾರ ಪದ್ಧತಿಯಿಂದ ಮಧುಮೇಹವನ್ನು ತಡೆಗಟ್ಟಬಹುದು, ವೈದ್ಯರು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !