ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್‌ಕುಮಾರ್ ಚಿತ್ರಗಳು ಈಗಲೂ ಪ್ರಸ್ತುತ: ಹಾಸ್ಯ ನಟ ನಾಗರಾಜ್ ಕೋಟೆ ಅಭಿಮತ

Published 21 ಏಪ್ರಿಲ್ 2024, 23:53 IST
Last Updated 21 ಏಪ್ರಿಲ್ 2024, 23:53 IST
ಅಕ್ಷರ ಗಾತ್ರ

ಬೆಂಗಳೂರು: ‘ನಟ ರಾಜ್‌ಕುಮಾರ್ ಅವರ ಚಲನಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರಿದ್ದವು. ಇದರಿಂದಾಗಿ ಅವರ ಚಲನಚಿತ್ರಗಳು ಇಂದಿಗೂ ಪ್ರಸ್ತುತ’ ಎಂದು ಹಾಸ್ಯ ನಟ ನಾಗರಾಜ್ ಕೋಟೆ ತಿಳಿಸಿದರು.

ಸಂಸ್ಕೃತಿ ಸೌರಭ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡ ರಾಜ್‌ಕುಮಾರ್ ಗೀತೋತ್ಸವ ಸಮಾರಂಭದಲ್ಲಿ ಕನ್ನಡ ಪರ ಹೋರಾಟಗಾರ ರಾಜು ಸಿ. ಚಾಮರಾಜಪೇಟೆ, ಡಾ.ರಾಜ್‌ಕುಮಾರ್ ಕಲಾಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಜಯರಾಮರಾಜು ಹಾಗೂ ಕೃಷ್ಣದೇವರಾಯ ಕನ್ನಡ ಅಭಿವೃದ್ಧಿ ಕಲಾ ಸಂಘದ ಅಧ್ಯಕ್ಷ ವಿ. ರಾಮದಾಸ್ ಅವರಿಗೆ ‘ಡಾ.ರಾಜ್‌ಕುಮಾರ್ ಅಭಿಮಾನಿ ಪುರಸ್ಕಾರ’ ಪ್ರದಾನ ಮಾಡಿದರು. 

‘ರಾಜ್‌ಕುಮಾರ್ ಅವರ ಗುಣಗಳನ್ನು ಮೈಗೂಡಿಸಿಕೊಂಡಿರುವವರು ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಸಮಾಜಮುಖಿ ಚಿತ್ರಗಳಿಂದಾಗಿ ಹಿರಿಯರ ಜತೆಗೆ ಹೊಸ ತಲೆಮಾರಿನವರೂ ಅಭಿಮಾನಿಗಳಾಗಿದ್ದಾರೆ’ ಎಂದು ನಾಗರಾಜ್ ಕೋಟೆ ಹೇಳಿದರು. 

ಸಂಗೀತ ನಿರ್ದೇಶಕ ವಿ.ಮನೋಹರ್, ‘ರಾಜ್‌ಕುಮಾರ್ ಅವರ ಗುಣಗಳು ನಮಗೆಲ್ಲ ಆದರ್ಶನೀಯ. ಅವರ ಹೆಸರಿನಲ್ಲಿ ಅಭಿಮಾನಿಗಳನ್ನು ಗೌರವಿಸುತ್ತಿರುವುದು ಶ್ಲಾಘನೀಯ’ ಎಂದು ತಿಳಿಸಿದರು. 

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ‘ರಾಜ್‌ಕುಮಾರ್ ಅವರು ಈ ನಾಡು ನುಡಿಯ ಬಹುದೊಡ್ಡ ಶಕ್ತಿಯಾಗಿದ್ದರು. ಒಬ್ಬ ಕಲಾವಿದರಾಗಿ ನಮಗೆ ಬಾಲ್ಯದಲ್ಲೇ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಿದರು’ ಎಂದು ಸ್ಮರಿಸಿಕೊಂಡರು. 

ಗಾಯಕರಾದ ಮೈಸೂರು ಕೃಷ್ಣಮೂರ್ತಿ, ಎಸ್. ರಘುನಾಥ್ ತಂಡವು ರಾಜಕುಮಾರ್ ರವರ ಜನಪ್ರಿಯ ಚಿತ್ರಗೀತೆಗಳನ್ನು ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT