ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2 ಕೋಟಿ ಮೌಲ್ಯದ ಡ್ರಗ್ಸ್‌ ವಶ

Last Updated 2 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ಉಡುಗೊರೆ ಹಾಗೂ ವೈದ್ಯಕೀಯ ಕಿಟ್‌ ಹೆಸರಿನಲ್ಲಿ ಮನೆಯ ಬಾಗಿಲಿಗೇ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ದೆಹಲಿ ಹಾಗೂ ಬಿಹಾರದ ಐವರು ಆರೋಪಿ ಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ಧಾರೆ.

ಸುಕಜಿತ್‌ ಸಿಂಗ್‌, ಸಾಗರ್ ಮೆಹ್ತಾ, ಹಿಮಾನ್ಶು ಠಾಕೂರ್‌, ಮಹಾಬಲಿ ಸಿಂಗ್‌ ಕುಶ್ವ ಹಾಗೂ ವಿಶಾಲ್‌ಕುಮಾರ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿ ₹ 2 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.

‘ದೆಹಲಿಯ ಮೂವರು, ಬಿಹಾರದ ಇಬ್ಬರು ಆರೋಪಿಗಳು ನಗರದ ವೈಟ್‌ಫೀಲ್ಡ್‌ ಹಾಗೂ ಮಾರತ್‌ಹಳ್ಳಿಯಲ್ಲಿ ನೆಲೆಸಿದ್ದರು. ಬಂಧಿತರಿಂದ ಎಂಡಿಎಂಎ ಕ್ರಿಸ್ಟಲ್‌, ಎಂಡಿಎಂಎ ಮಾತ್ರೆಗಳು, ಎಲ್‌ಎಸ್‌ಡಿ ಸ್ಟ್ರಿಪ್‌ಗಳು, ಕೊಕೈನ್, ಹ್ಯಾಶಿಶ್‌ ಆಯಿಲ್, ಚರಸ್‌ ಹಾಗೂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹಣಕಾಸಿನ ವ್ಯವಹಾರ ನಡೆಸುತ್ತಿದ್ದ 5 ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿ, ಇತರೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಿಸಿಬಿ ಪೊಲೀಸ್‌ ಮೂಲಗಳು ತಿಳಿಸಿವೆ.

‘ವಿದೇಶಿ ಹಾಗೂ ಸ್ಥಳೀಯ ವ್ಯಾಪಾರಿಗಳಿಂದ ‘ಕ್ರಿಪ್ಟೊ ಕರೆನ್ಸಿ’ಯ ಮೂಲಕ ಮಾದಕ ವಸ್ತುಗಳನ್ನು ಖರೀದಿಸಿ ಒಂದೆಡೆ ಶೇಖರಣೆ ಮಾಡಿಕೊಳ್ಳುತ್ತಿದ್ದರು. ನಿರುದ್ಯೋಗಿ ಯುವಕರನ್ನು ಡ್ರಗ್ಸ್‌ ಪೂರೈಕೆಗೆ ನೇಮಕ ಮಾಡಿಕೊಂಡು ಅವರನ್ನು ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿಯಲ್ಲಿ ನಿಯೋಜಿಸಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯ ಮಾಡಿಸುತ್ತಿದ್ದರು. ಅದಾದ ಮೇಲೆ ಗ್ರಾಹಕರಿಗೆ ಇದೇ ಯುವಕರ ಮೂಲಕ ಮಾದಕ ವಸ್ತುಗಳನ್ನು ಗ್ರಾಹಕರಿಗೆ ಮನೆಗೇ ಪೂರೈಸುತ್ತಿದ್ದರು. ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಮುಂತಾದ ಮಾಧ್ಯಮಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದರು. ಜನ್ಮದಿನ ಉಡುಗೊರೆ ಕವರ್‌, ವೈದ್ಯಕೀಯ ಕಿಟ್‌, ಕೊರಿಯರ್‌ ಕವರ್‌ಗಳಲ್ಲಿ ಮಾದಕ ವಸ್ತುಗಳನ್ನಿಟ್ಟು ಮಾರಾಟದ ದಂಧೆ ನಡೆಸುತ್ತಿದ್ದರು’ ಎಂದು ಮೂಲಗಳು
ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT