ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 7.80 ಕೋಟಿ ಮೌಲ್ಯದ ಡ್ರಗ್ಸ್‌ ವಶ

Last Updated 28 ಸೆಪ್ಟೆಂಬರ್ 2022, 4:31 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶದ ಸಿಂತಪಲ್ಲಿ ಹಾಗೂ ಅರಕ್ಕು ಎಂಬ ಅರಣ್ಯ ಪ್ರದೇಶದಿಂದ ಮಾದಕ ವಸ್ತುಗಳನ್ನು ತಂದು ನಗರದಲ್ಲಿ ಮಾರುತ್ತಿದ್ದ ವಿದೇಶಿ ಡ್ರಗ್ಸ್‌ ಪೆಡ್ಲರ್‌ ಸೇರಿ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪುಷ್ಪಾ, ವಿಜಯಾ, ದೇವಿ ಹಾಗೂ ಪೂರ್ಣಿಮಾ ಬಂಧಿತರು. ಇವರಿಂದ ಡ್ರಗ್ಸ್ ಖರೀದಿಸುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.

8 ಕೆ.ಜಿ. ಹ್ಯಾಶಿಶ್‌ ಆಯಿಲ್‌, 10 ಕೆ.ಜಿ. ಗಾಂಜಾ ಹಾಗೂ 1 ಕೆ.ಜಿ. 4 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿರುವ ಮಾದಕ ವಸ್ತುಗಳ ಮೌಲ್ಯ ₹ 7.80 ಕೋಟಿ ಆಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಶಾಂತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದು ಬೆಂಗಳೂರಿನ ಆಟೊ ನಿಲ್ದಾಣವೊಂದರಲ್ಲಿ ವಿದೇಶಿ ಪ್ರಜೆಗೆ ಡ್ರಗ್ಸ್ ಪೂರೈ
ಸುತ್ತಿದ್ದರು ‌ಎಂದು ಮೂಲಗಳು ಹೇಳಿವೆ.

ಪ್ರಕರಣದ ಪ್ರಮುಖ ರೂವಾರಿ ಆಂಧ್ರಪ್ರದೇಶದ ವ್ಯಕ್ತಿಯಾಗಿದ್ದಾನೆ. ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅರಕ್ಕು ಹಾಗೂ ಸಿಂತಪಲ್ಲಿ ಎಂಬಲ್ಲಿ ಅಡಗಿಕೊಂಡು ಹ್ಯಾಶಿಶ್‌ ಆಯಿಲ್‌ ಅನ್ನು ತಯಾರಿಸಿ ಬೆಂಗಳೂರು, ಹೈದರಾಬಾದ್, ಕೊಚ್ಚಿನ್‌, ಚೆನ್ನೈ ಹಾಗೂ ಮುಂಬೈ ಸೇರಿ ವಿವಿಧ ಮಹಾನಗರಗಳಿಗೆ ಪೂರೈಸುತ್ತಿದ್ದಾನೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT