ಗುರುವಾರ , ನವೆಂಬರ್ 21, 2019
20 °C

ಜಿಡಿಪಿ ಕುಸಿತ ನಿಯಂತ್ರಣ ದೊಡ್ಡ ಸವಾಲು: ಸದಾನಂದಗೌಡ

Published:
Updated:

ಬೆಂಗಳೂರು: ‘ಶೇ5 ಕ್ಕೆ ಕುಸಿದ ದೇಶದ ಜಿಡಿಪಿಯನ್ನು ನಿಯಂತ್ರಣಕ್ಕೆ ತರುವುದು ಸವಾಲಿನ ಕೆಲಸ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ವಿವರಿಸಲು ಕರೆದ ಮಾಧ್ಯಮಗೋಷ್ಠಿಯಲ್ಲಿ ಆರ್ಥಿಕ ಸ್ಥಿತಿಯನ್ನು ತಹಬದಿಗೆ ತರಲು ನಡೆಸಿರುವ ಪ್ರಯತ್ನಗಳನ್ನು ಅವರು ವಿವರಿಸಿದರು.

‘ಆರ್ಥಿಕ ಸ್ಥಿತಿಯನ್ನು ಸರಿಪಡಿಸಲು ತುರ್ತಾಗಿ ಹಲವು ಕ್ರಮ ಕೈಗೊಂಡಿದ್ದೇವೆ. ಮುಖ್ಯವಾಗಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳ ವಿಲೀನ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಣದ ಹರಿವಿಗಾಗಿ ಬ್ಯಾಂಕ್‌ಗಳಿಗೆ ₹ 70 ಸಾವಿರ ಕೋಟಿ ಮುಂಗಡವಾಗಿ ನೀಡಲಾಗಿದೆ. ಸಾಂಸ್ಥಿಕ, ಚಿಲ್ಲರೆ ಸಾಲಗಾರರು, ಎಂಎಸ್‌ಎಂಇ, ಸಣ್ಣ ವ್ಯಾಪಾರಿಗಳು ಮತ್ತು ಇತರರಿಗೆ ಸಾಲ ವಿತರಿಸಲು  ₹ 5.50 ಲಕ್ಷ ಕೋಟಿ ಹೆಚ್ಚುವರಿ ಸಾಲ ನೀಡಲಾಗಿದೆ’ ಎಂದರು.

ಬಡ್ಡಿ ದರಕ್ಕೆ ರೆಪೊ ದರ ಬೆಸೆಯುವಿಕೆ, ಗೃಹ ಸಾಲ, ವಾಹನ ಸಾಲಗಳ ಮೇಲಿನ ಇಎಂಐಗಳ ಇಳಿಕೆ, ಸಕಾಲದಲ್ಲಿ ಬ್ಯಾಂಕ್‌ ದರ ಕಡಿತ ಮಾಡಲಾಗುತ್ತಿದೆ. ಉದ್ಯೋಗ ಸೃಷ್ಟಿಗಾಗಿ ಹೆಚ್ಚಿನ ಹಣ ನೀಡಲಾಗುತ್ತದೆ ಎಂದು ಸದಾನಂದಗೌಡ ತಿಳಿಸಿದರು.

 

ಪ್ರತಿಕ್ರಿಯಿಸಿ (+)