ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ

Last Updated 24 ಏಪ್ರಿಲ್ 2018, 8:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆಲವು ಗುತ್ತಿಗೆದಾರರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಈ‌ ದಾಳಿ ನಡೆದಿದೆ.

11 ಗುತ್ತಿಗೆದಾರರನ್ನು ಗುರಿಯಾಗಿಟ್ಟುಕೊಂಡು ದಾಳಿ‌ ನಡೆಸಲಾಗಿದೆ. ಲೋಕೋಪಯೋಗಿ ಸಚಿವರ ಮನೆ ಮೇಲೆ ದಾಳಿ‌ ಆಗಿಲ್ಲ ಎಂದು ಐ.ಟಿ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವೃತ್ತದ ತನಿಖಾ ವಿಭಾಗದ ಮಹಾ ನಿರ್ದೇಶಕರು, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಈ ವರ್ಷದ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ರಾಜ್ಯದ ಐದು ಪ್ರಮುಖ ಇಲಾಖೆಗಳಿಂದ ಬಿಡುಗಡೆ ಮಾಡಿದ ಕಾಮಗಾರಿ ಬಿಲ್ ಕುರಿತು ಮಾಹಿತಿ ಕೇಳಿದ್ದರು.

ಕಳೆದ ವಾರ ಕಂದಾಯ, ಲೋಕೋಪಯೋಗಿ, ಇಂಧನ, ಫಶುಸಂಗೋಪನೆ ಹಾಗೂ ಜಲ ಸಂಪನ್ಮೂಲ ಇಲಾಖೆಗಳು ಐ.ಟಿಗೆ ಮಾಹಿತಿ‌ ಕಳುಹಿಸಿದ್ದವು. ಕಳೆದ ವರ್ಷ ಇದೇ ಅವಧಿಗೆ ಬಿಡುಗಡೆ ಆಗಿದ್ದ‌ ಹಣದ ಜೊತೆ ಹೋಲಿಕೆ‌ ಮಾಡಿದ ಬಳಿಕ ಕೆಲವು ಗುತ್ತಿಗೆದಾರರ ಮನೆಗಳ ಮೇಲೆ ದಾಳಿ‌ ಮಾಡಲಾಗಿದೆ.

ಚುನಾವಣೆಗೆ ಹಣ ಬಿಡುಗಡೆ?

ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ನೆಪದಲ್ಲಿ ಚುನಾವಣೆಗೆ ಖರ್ಚು‌ ಮಾಡಲು ಹಣ ಬಿಡುಗಡೆ ಮಾಡಿದೆ‌‌ ಎಂದು‌ ಐ.ಟಿ  ಮೂಲಗಳು‌ ಇತ್ತೀಚೆಗೆ ಆರೋಪಿಸಿಸಿದ್ದವು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT