ಮಂಗಳವಾರ, ನವೆಂಬರ್ 12, 2019
27 °C

ಈದ್ ಮಿಲಾದ್; ಮದ್ಯ ಮಾರಾಟ ನಿಷೇಧ

Published:
Updated:

ಬೆಂಗಳೂರು: ಈದ್ ಮಿಲಾದ್ ಹಬ್ಬದ ಪ್ರಯುಕ್ತ ನ. 10ರಂದು ನಸುಕಿನ 1 ಗಂಟೆಯಿಂದ ಮದ್ಯರಾತ್ರಿ 12ರವರೆಗೆ ನಗರದಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮಂಗಳವಾರ ಆದೇಶ ಹೊರಡಿಸಿದ್ದಾರೆ.

‘ಹಬ್ಬದ ಪ್ರಯುಕ್ತ ನಗರದ ಹಲವೆಡೆ ಮೆರವಣಿಗೆ ನಡೆಯಲಿದೆ. ಕೆಲ ಕಿಡಿಗೇಡಿಗಳು ಮದ್ಯ ಕುಡಿದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದೆ. ಹೀಗಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಂದು ಯಾವುದೇ ಬಾರ್‌ಗಳು, ವೈನ್ ಶಾಪ್ ಹಾಗೂ ಪಬ್‌ಗಳಲ್ಲಿ ಮದ್ಯ ಮಾರುವಂತಿಲ್ಲ. ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ಪ್ರತಿಕ್ರಿಯಿಸಿ (+)