ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ: ಸಾಮಾಜಿಕ ಮೌಲ್ಯಮಾಪನಕ್ಕೆ ಮನವಿ

Last Updated 28 ನವೆಂಬರ್ 2022, 16:25 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣ ರಾಜ್ಯದ ಎಲ್ಲ ಭಾಗದಲ್ಲೂ ನಡೆದಿರುವ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಸಾಮಾಜಿಕ ಮೌಲ್ಯಮಾಪನ ಮಾಡಬೇಕು ಎಂದು ಸಿಟಿಜನ್ಸ್‌ ಕಮಿಷನ್‌ ಆನ್‌ ಎಲೆಕ್ಷನ್‌ ವತಿಯಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ಮನವಿ ಮಾಡಲಾಗಿದೆ.

‘ಸಾರ್ವಜನಿಕರು ತಮ್ಮ ಹೆಸರು ಹಾಗೂ ತಮ್ಮ ಸುತ್ತಮುತ್ತಲಿನ ಮತದಾರರ ಮಾಹಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಮಾಡಬೇಕು. ಈ ಮೂಲಕ ಬೋಗಸ್‌ ಹೆಸರು, ನಕಲಿ ಸೇರ್ಪಡೆ ಸಾಧ್ಯವಾಗುವುದಿಲ್ಲ. ಅಲ್ಲದೆ, ಎಲ್ಲ ಮತದಾರರ ಹೆಸರು ಪಟ್ಟಿಗೆ ಸೇರ್ಪಡೆಯಾಗಲು ಇದು ಸಹಕಾರಿಯಾಗಲಿದೆ’ ಎಂದು ಸಿಟಿಜನ್ಸ್‌ ಕಮಿಷನ್‌ ಆನ್‌ ಎಲೆಕ್ಷನ್‌ನ ಮುಖ್ಯ ಸಂಯೋಜಕ ಎಂ.ಜಿ ದೇವಸಹಾಯಂ ತಿಳಿಸಿದ್ದಾರೆ.

‘ಈ ಸಾಮಾಜಿಕ ಮೌಲ್ಯಮಾಪನವನ್ನು ನರೇಗಾದಂತಹ ಸಾಮಾಜಿಕ ವಲಯದ ಕಾರ್ಯಕ್ರಮಗಳ ಮೂಲಕ ಪುನರ್‌ಪರಿಶೀಲಿಸಬೇಕು’ ಎಂದಿದ್ದಾರೆ.

‘ಸಾಮಾಜಿಕ ಮೌಲ್ಯಮಾಪನಕ್ಕೆ ಕೇಂದ್ರ ಚುನಾವಣೆ ಆಯೋಗದ ಆದೇಶದ ಅಗತ್ಯವಿದ್ದು, ಮತದಾರರ ಪಟ್ಟಿಯನ್ನು ಪಂಚಾಯಿತಿ, ವಾರ್ಡ್‌, ಬೂತ್‌ಗಳಲ್ಲಿ 15 ದಿನ ಪ್ರದರ್ಶಿಸಬೇಕು. ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ಸಮ್ಮುಖದಲ್ಲಿ ಮತದಾರರು ಪಟ್ಟಿಯನ್ನು ಪರಿಶೀಲಿಸಬೇಕು. ಮತದಾರರ ಪಟ್ಟಿಯ ಬಗ್ಗೆ ನಂಬಿಕೆ ಉಳಿಯಬೇಕಾದರೆ ಈ ರೀತಿಯ ಮೌಲ್ಯಮಾಪದನ ಅಗತ್ಯವಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT