ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಗೇರಿ: ಪರಿಸರ ರಕ್ಷಣೆ ವೈಯಕ್ತಿಕ ಜವಾಬ್ದಾರಿ- ಪೊರಕೆ ಮಂಜಪ್ಪ

Published 29 ಜೂನ್ 2024, 20:14 IST
Last Updated 29 ಜೂನ್ 2024, 20:14 IST
ಅಕ್ಷರ ಗಾತ್ರ

ಕೆಂಗೇರಿ: ಪರಿಸರ ರಕ್ಷಣೆ ಎಲ್ಲರ ವೈಯಕ್ತಿಕ ಜವಾಬ್ದಾರಿ. ಈ ಕಾರ್ಯಕ್ಕೆ ಅನ್ಯರ ಸಹಕಾರ ನಿರೀಕ್ಷೆ ಸಲ್ಲದು ಎಂದು ಪರಿಸರ ಪ್ರೇಮಿ ಬಡಮಾರನಹಳ್ಳಿ ಪೊರಕೆ ಮಂಜಪ್ಪ ಹೇಳಿದರು.

ಪರಿಸರ ಸೇನೆ ಮತ್ತು ಜಗಯೋಗಾಲಯ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಯೋಗ ಶಿಬಿರ ಹಾಗೂ ಶ್ರಮದಾನ ಕಾರ್ಯಕ್ರಮದಲ್ಲಿ ಭೀಮನಕುಪ್ಪೆ ಕೆರೆ ಸ್ವಚ್ಛಗೊಳಿಸಿ ಅವರು ಮಾತನಾಡಿದರು.

‘ಸಂಘಟನೆಯ ವತಿಯಿಂದ ಪ್ರತಿ ತಿಂಗಳ ನಾಲ್ಕನೇ ಶನಿವಾರ ಶ್ರಮದಾನ ಹಾಗೂ ಯೋಗ ಶಿಬಿರ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ನೂರಾರು ಸಸಿಗಳನ್ನು ನೆಡಲಾಗುತ್ತಿದೆ. ಕೆರೆಗಳ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ಆಸಕ್ತ ಪರಿಸರ ಪ್ರೇಮಿಗಳು ಮೊಬೈಲ್ ಸಂಖ್ಯೆ 8095623071 ಸಂಪರ್ಕಿಸಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಬಹುದು’ ಎಂದು ಮನವಿ ಮಾಡಿದರು.

ಸ್ಥಳೀಯರ ಸಹಕಾರದೊಂದಿಗೆ ಶಿರಾ ತಾಲೂಕಿನ ಐದು ಗ್ರಾಮಗಳನ್ನು ಕೆಲ ತಿಂಗಳಲ್ಲಿ ಸಂಪೂರ್ಣ ಸ್ವಚ್ಫ ಗ್ರಾಮವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.

ಯೋಗ ಶಿಕ್ಷಕಿ ತೇಜಸ್ವಿನಿ, ವೃಕ್ಷಾಸನ ಪ್ರದರ್ಶಿಸಿದರು. ಕ್ರಮ ಬದ್ಧ ಯೋಗಾಸನದ ಬಗ್ಗೆ ಮಾಹಿತಿ ಹಂಚಿಕೊಂಡರು.

ಬಡಮಾರನಹಳ್ಳಿ ಪೊರಕೆ ಮಂಜಪ್ಪ, ಜಗಯೋಗಾಲಯದ ಜಗದೀಶ್, ತೇಜಸ್ವಿನಿ, ಮಧುಸೂದನ್, ಕಲ್ಲೇಶ್, ಗಿರೀಶ್, ರವೀಂದ್ರ, ಶ್ರೀಕುಮಾರ್, ಪದ್ಮಮ್ಮ, ಅಕ್ಷತಾ ಕೆರೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT