ಸಮಾನತೆ, ಸಹಬಾಳ್ವೆಯಿಂದ ಸಮಾಜದ ಬೆಳವಣಿಗೆ

7

ಸಮಾನತೆ, ಸಹಬಾಳ್ವೆಯಿಂದ ಸಮಾಜದ ಬೆಳವಣಿಗೆ

Published:
Updated:
Deccan Herald

ಬೆಂಗಳೂರು: 'ಸಮಾನತೆ, ಸಹಬಾಳ್ವೆ, ಮಾನವೀಯತೆಯಂತಹ ಉದಾರ ಗುಣಗಳಿಂದ ಸಮಾಜದ ಬೆಳವಣಿಗೆ ಸಾಧ್ಯ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಬಸವರಾಜ ಸಾದರ್ ಅಭಿಪ್ರಾಯಪಟ್ಟರು.

ಪೀಣ್ಯದಾಸರಹಳ್ಳಿ ಸಮೀಪ ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಮತ್ತು ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ವಚನ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

'ಜಾತಿ ಎಂಬ ಪೆಡಂಭೂತ ತೊಲಗಿಸಿ ಮಾನವ ಜಾತಿ ತಾನೊಂದೇ ವಲಂ ಎಂಬುದನ್ನು ಸಾಬೀತುಪಡಿಸುವುದು ಅನಿವಾರ್ಯವಾಗಿದೆ' ಎಂದರು.

ಮಹಾರಾಣಿ ವಿಜ್ಞಾನ ಕಾಲೇಜಿನ ಉಪನ್ಯಾಸಕಿ ಡಾ.ಎಲ್.ಜಿ.ಮೀರಾ 'ಸ್ತ್ರೀಯರಿಗೆ ಸಮಾನತೆ ನೀಡುವುದು ಅವಶ್ಯಕವಾಗಿದೆ. ಪುರುಷ ಪ್ರಧಾನತೆ ತೊಲಗಿಸಿ ಹೆಣ್ಣಿನ ಶ್ರೇಯೋಭಿವೃದ್ಧಿಗೆ ಸಮಾಜದಲ್ಲಿ ಅವಕಾಶ ಮಾಡಿಕೊಡಬೇಕು' ಎಂದರು.

ಕಾಲೇಜಿನ ಉಪಪ್ರಾಂಶುಪಾಲ ರೆ.ಫಾ.ವಿನೀತ್ ಜಾರ್ಜ್‌ ಮಾತನಾಡಿ 'ಧರ್ಮಗಳು ಎಲ್ಲರಿಗೂ ಒಂದೇ. ಅವುಗಳಿಂದ ಸಮಾಜಕ್ಕೆ ಶಾಂತಿ, ನೆಮ್ಮದಿ ದೊರಕಿ ಎಲ್ಲರೂ ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸಿ ಮುಕ್ತಿ ಹೊಂದಬೇಕು' ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !