ಬುಧವಾರ, ಫೆಬ್ರವರಿ 1, 2023
16 °C

ಪೊಲೀಸರ ಸೋಗು ಲಾಠಿ ತೋರಿಸಿ ₹ 80 ಲಕ್ಷ ಸುಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಲಾಠಿ ತೋರಿಸಿ ₹ 80 ಲಕ್ಷ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚಂದನ್ ಎಂಬುವವರು ಸುಲಿಗೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಚಂದನ್, ತುಮ
ಕೂರಿನ ಅಡಿಕೆ ವ್ಯಾಪಾರಿ ಮೋಹನ್ ಎಂಬುವವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಚಂದನ್ ಹಾಗೂ ಕೆಲಸಗಾರ ಕುಮಾರಸ್ವಾಮಿ ಅವರಿಗೆ ಡಿ. 27ರಂದು ₹ 80 ಲಕ್ಷ ನೀಡಿದ್ದ ಮೋಹನ್, ಸೇಲಂನಲ್ಲಿರುವ ಪರಿಚಯಸ್ಥರಿಗೆ ನೀಡುವಂತೆ ಹೇಳಿದ್ದರು.’ ‘ಹಣದ ಬ್ಯಾಗ್ ಪಡೆದಿದ್ದ ಚಂದನ್ ಹಾಗೂ ಕುಮಾರಸ್ವಾಮಿ, ಮಹೇಂದ್ರ ಎಕ್ಸ್‌ಯುವಿ ಕಾರಿನಲ್ಲಿ (ಕೆಎ 06 ಜೆಡ್ 7270) ತುಮಕೂರಿನಿಂದ ಹೊರಟಿದ್ದರು. ನೆಲಮಂಗಲ, ಗೊರಗುಂಟೆಪಾಳ್ಯ, ನಾಯಂಡನಹಳ್ಳಿ, ಮೈಸೂರು ರಸ್ತೆ ಮೂಲಕ ಕೆ.ಎಚ್.ರಸ್ತೆಗೆ ಬಂದಿದ್ದರು. ಸಿಗ್ನಲ್‌ ಇದ್ದಿದ್ದರಿಂದ ಕಾರು ನಿಲ್ಲಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು