ಭಾನುವಾರ, ಮೇ 16, 2021
22 °C

ಕಿರುಕುಳ: ಮಾವನ ವಿರುದ್ಧ ಸೊಸೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪತಿಯಿಂದ ಮಕ್ಕಳಾಗುವುದಿಲ್ಲವೆಂದು ಹೇಳುತ್ತಿರುವ ಮಾವ, ತನ್ನ ಜೊತೆಯೇ ಸಂಸಾರ ಮಾಡುವಂತೆ ಒತ್ತಾಯಿಸಿ ನನಗೆ ಕಿರುಕುಳ ನೀಡುತ್ತಿದ್ದಾನೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

‘ಸ್ಥಳೀಯ ವೀರಭದ್ರಸ್ವಾಮಿ ಲೇಔಟ್ನಿವಾಸಿಯಾದ ಮಹಿಳೆ ದೂರು ನೀಡಿದ್ದಾರೆ. ಪತಿ, ಮಾವ ಹಾಗೂ ಅತ್ತೆ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ದೂರಿನ ವಿವರ: ‘ವರ್ಷದ ಹಿಂದಷ್ಟೇ ನನ್ನ ಮದುವೆಯಾಗಿದೆ. ಮೊದಲ ರಾತ್ರಿ ಪತಿ ನನ್ನನ್ನು ಮುಟ್ಟಲಿಲ್ಲ. ಹೀಗಾಗಿ, ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಪತಿಗೆ ಆರೋಗ್ಯ ಸಮಸ್ಯೆ ಇರುವುದಾಗಿ ವೈದ್ಯರು ಹೇಳಿದ್ದರು. ಅವರ ಸಲಹೆಯಂತೆ ಪತಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಲಾಗಿತ್ತು. ಅದಾದ ಬಳಿಕವೂ ಅವರು ಸರಿ ಹೋಗಲಿಲ್ಲ’ ಎಂದು ದೂರಿನಲ್ಲಿ ಮಹಿಳೆ ಹೇಳಿದ್ದಾರೆ.

‘ಮಕ್ಕಳಾಗದಿರುವುದನ್ನೇ ಮುಂದಿಟ್ಟುಕೊಂಡು ಅತ್ತೆ–ಮಾವ ಕಿರುಕುಳ ನೀಡಲಾರಂಭಿಸಿದ್ದರು. ‘ಎಲ್ಲರಿಗೂ ಮಕ್ಕಳಾಗುತ್ತವೆ. ನಿನಗೆ ಏಕೆ ಆಗುವುದಿಲ್ಲ. ನನ್ನ ಜೊತೆಯೇ ಸಂಸಾರ ಮಾಡು ಬಾ’ ಎಂದು ಮಾವ ಅನುಚಿತವಾಗಿ ವರ್ತಿಸಿದರು’ ಎಂದೂ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು