ಬೆಂಗಳೂರು: ನಿವೃತ್ತ ಡಿಜಿಪಿ ಪಿ.ಜಿ.ಹರ್ಲಂಕರ್ ನಿಧನ
ಬೆಂಗಳೂರು: ನಿವೃತ್ತ ಡಿಜಿಪಿ ಪಿ.ಜಿ. ಹರ್ಲಂಕರ್ (88) ಅವರು ವಿಕ್ರಮ್ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾದರು.
1983ರಿಂದ 1986ರ ಅವಧಿಯಲ್ಲಿ ನಗರ ಪೊಲೀಸ್ ಕಮಿಷನರ್ ಆಗಿಯೂ ಹರ್ಲಂಕರ್ ಅವರು ಕೆಲಸ ಮಾಡಿದ್ದರು. ನಿವೃತ್ತ ನಂತರ ಪುಲಿಕೇಶಿನಗರದ ರಿಚರ್ಡ್ಸ್ ಟೌನ್ನಲ್ಲಿ ವಾಸವಿದ್ದರು. ಅನಾರೋಗ್ಯದಿಂದಾಗಿ ಅವರನ್ನು ಇತ್ತೀಚೆಗೆ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಹರ್ಲಂಕರ್ ಅವರ ಇಚ್ಛೆಯಂತೆ, ಅವರ ಪಾರ್ಥೀವ ಶರೀರವನ್ನು ಮಡಿವಾಳದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾನ ಮಾಡಲಾಗಿದೆ’ ಎಂದು ಕುಟುಂಬದವರು ತಿಳಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.