ಮಂಗಳವಾರ, ಫೆಬ್ರವರಿ 25, 2020
19 °C

ಅಸಂಖ್ಯ ಪ್ರಮಥರ ಗಣಮೇಳಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 12ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ್ದ ಗಣಗಳ ಸಮಾವೇಶವನ್ನು ನೆನಪಿಸುವ ಮಾದರಿಯಲ್ಲೇ ಆಯೋಜನೆಗೊಳ್ಳಲಿದೆ ಎಂದು ಹೇಳಲಾಗುತ್ತಿರುವ ಅಸಂಖ್ಯ ಪ್ರಮಥರ ಗಣಮೇಳಕ್ಕೆ ಸಿದ್ಧತೆ ಭರದಿಂದ ಸಾಗಿದೆ.

‘ಇದೇ 16ರಂದು ನಗರದ ತುಮಕೂರು ರಸ್ತೆಯ ನೈಸ್ ರೋಡ್ ಪಕ್ಕದ ನಂದಿ ಗ್ರೌಂಡ್‌ನಲ್ಲಿ ಈ ಮಹಾಮೇಳ ನಡೆಯಲಿದೆ. 12ನೇ ಶತಮಾನದಲ್ಲಿ ನಡೆದಿದ್ದ ಗಣಗಳ ಸಮಾವೇಶ ಇತಿಹಾಸದ ರೋಚಕ ಸಂಗತಿ. ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ 9 ದಶಕಗಳ ನಂತರ ಅದೇ ರೀತಿಯ ಚಾರಿತ್ರಿಕ ಘಟನೆಗೆ ಸಾಕ್ಷಿಯಾಗಬೇಕೆಂಬ ಉದ್ದೇಶದಿಂದ ಈ ಗಣಮೇಳ ಆಯೋಜನೆಗೊಳಿಸಲಾಗುತ್ತಿದೆ’ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

‘ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲಾ ಧರ್ಮಗುರು, ಸಂತರು, ಸಾಂಸ್ಕೃತಿಕ ಚಿಂತಕರು, ಸಂಸ್ಕೃತಿ ಚಿಂತಕರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಮುರುಘಾ ಶರಣರು ‘ಶಿವಯೋಗ ಸಂಭ್ರಮ’ ನೆರವೇರಿಸಲಿದ್ದು, 10 ಗಂಟೆಗೆ ಗಣಮೇಳ ಆರಂಭವಾಗಲಿದ್ದು, ಸಂಜೆ 5ರವರೆಗೆ ನಡೆಯಲಿದೆ’ ಎಂದು ವಿವರಿಸಿದ್ದಾರೆ.

2 ಲಕ್ಷಕ್ಕೂ ಹೆಚ್ಚು ಜನರು ಈ ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಆಯೋಜಕರು ನಿರೀಕ್ಷಿಸಿದ್ದಾರೆ. ಅದಕ್ಕೆ ಬೇಕಿರುವ ವ್ಯವಸ್ಥೆಗಳನ್ನು ವಿಶಾಲವಾದ ಮೈದಾನದಲ್ಲಿ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವ ಶರಣರ ಸಮ್ಮೇಳನದಲ್ಲಿ ಎಲ್ಲಾ ಪಕ್ಷದ ನಾಯಕರೂ ಭಾಗವಹಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು