ಬುಧವಾರ, ಫೆಬ್ರವರಿ 26, 2020
19 °C

810 ಗ್ರಾಂ ಚಿನ್ನ ಸಮೇತ ಕೆಲಸಗಾರ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವ್ಯಾಪಾರಿ ಅಕ್ಷಯ್ ದೇವಕರ್ ಎಂಬುವರ ಜ್ಯುವೆಲರಿ ಮಳಿಗೆಯಲ್ಲಿ ಕೆಲಸಕ್ಕಿದ್ದ ರೋಹಿತ್‌ ಕರಾಟ್ ಅಲಿಯಾಸ್ ವಿಜಯ್‌ ಎಂಬಾತ 810 ಗ್ರಾಂ ಚಿನ್ನದ ಸಮೇತ ಪರಾರಿಯಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಕ್ಷಯ್ ಅವರು ನೀಡಿರುವ ದೂರು ಆಧರಿಸಿ ರೋಹಿತ್ ಹಾಗೂ ಆತನ ಇಬ್ಬರು ಸ್ನೇಹಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಕ್ಷಯ್ ಅವರು ಸ್ನೇಹಿತ ಸೋಮನಾಥ್‌ ಎಂಬುವರ ಜೊತೆ ಆಭರಣಗಳ ವಹಿವಾಟು ನಡೆಸುತ್ತಿದ್ದರು. ಅವರ ಮೂಲಕವೇ 10 ದಿನಗಳ ಹಿಂದಷ್ಟೇ ರೋಹಿತ್‌ನ ಪರಿಚಯವಾಗಿತ್ತು. ಆತನಿಗೆ ಕೆಲಸ ನೀಡಿ ಮಳಿಗೆಯಲ್ಲಿ ಇಟ್ಟುಕೊಂಡಿದ್ದರು’ 

‘ನ. 16ರಂದು ಸೋಮನಾಥ್ ಅವರ ಕಡೆಯಿಂದ ಚಿನ್ನದ ಬಿಸ್ಕತ್‌ಗಳನ್ನು ತರಲು ರೋಹಿತ್‌ನನ್ನು ಕಳುಹಿಸಿದ್ದರು. ₹28 ಲಕ್ಷ ಮೌಲ್ಯದ 810 ಗ್ರಾಂ ಚಿನ್ನದ ಬಿಸ್ಕತ್‌ ಪಡೆದಿದ್ದ ರೋಹಿತ್‌ ಮಳಿಗೆಗೆ ವಾಪಸು ಬಾರದೇ ಪರಾರಿಯಾಗಿರುವುದಾಗಿ ದೂರುದಾರ ಅಕ್ಷಯ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು