ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂಬೆ ನೋಡಿ ಗಾದೆ ಹೇಳಿ: ವೈರಲ್ ಆಯ್ತು ಗಾದೆಗೊಂಬೆಗಳು, ನೀವೂ ಪ್ರಯತ್ನಿಸಿ

Last Updated 4 ಅಕ್ಟೋಬರ್ 2019, 10:02 IST
ಅಕ್ಷರ ಗಾತ್ರ

ನಿಮ್ಮ ವಾಟ್ಸ್ಯಾಪ್‌ ನಂಬರ್‌ಗೂ ಗಾದೆಗೊಂಬೆಗಳ ಚಿತ್ರ, ಸವಾಲು ಬಂದಿದ್ಯಾ? ಯಾರ ಮನೆಯಲ್ಲಿ ಇಂಥ ಗೊಂಬೆಗಳನ್ನು ಕೂಡಿಸಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದೆಯೇ?

---

ಹಲವು ವಾಟ್ಸ್ಯಾಪ್‌ ಗ್ರೂಪ್‌ಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿಕಳೆದ ಎರಡು ದಿನಗಳಿಂದ ಗಾದೆಗೊಂಬೆಗಳ ಚಿತ್ರಗಳು, ಸವಾಲ್–ಜವಾಬ್ ಪ್ರಯತ್ನಗಳು ಒಂದೇ ಸಮ ಶೇರ್ ಆಗ್ತಿವೆ. ಹೀಗೆ ಗಾದೆಗೊಂಬೆ ಶೇರ್‌ ಮಾಡುತ್ತಿರುವ ಬಹುತೇಕ ಜನರಿಗೆ ಅದರ ಮೂಲ ಎಲ್ಲಿಯದು ಅಂತ ಗೊತ್ತಿಲ್ಲ.

‘ನನಗೆ ನನ್ನ ಫ್ರೆಂಡ್ ಕಳ್ಸಿದ್ದ. ಇಷ್ಟವಾಯ್ತು, ಅದ್ಕೆ ಫಾರ್ವಾರ್ಡ್‌ ಮಾಡಿದೆ. ಚಿಕ್ಕಂದಿನಲ್ಲಿ ನನ್ನ ಅಜ್ಜಿ, ಅಪ್ಪ ಹೇಳ್ತಿದ್ದ ಗಾದೆಗಳೆಲ್ಲಾ ನೆನಪಾದ್ವು. ಯಾರು ಇಂಥ ಐಡಿಯಾ ಮಾಡಿದ್ದಾರೋ ಅವರಿಗೊಂದು ಥ್ಯಾಂಕ್ಸ್‌’ ಎಂದು ಗಾದೆಗೊಂಬೆಗಳ ಚಿತ್ರ–ಒಕ್ಕಣೆಯನ್ನು ತಮ್ಮ ಫ್ಯಾಮಿಲಿ ವಾಟ್ಸ್ಯಾಪ್‌ ಗ್ರೂಪ್‌ನಲ್ಲಿ ಶೇರ್ ಮಾಡಿದ್ದ ಯಮುನಾ ಕೃತಜ್ಞತೆ ಸಲ್ಲಿಸಿದರು.

‘ಕನ್ನಡದ ಜನಪ್ರಿಯ ಗಾದೆಗಳಿಗೆ ಹೊಂದುವಂತೆ ಗೊಂಬೆ ಕೂಡಿಸಿದವರು ಯಾರೇ ಆಗಿದ್ದರೂ ಅವರಿಗೊಂದು ಸಲಾಂ. ಮೊಬೈಲ್ ಹಿಡಿದು ವಿಡಿಯೊ ಗೇಂ ಆಡುತ್ತಿದ್ದ ನನ್ನ ಮಕ್ಕಳು ಈಗ ಗಾದೆ ಕಂಡುಹಿಡಿಯಲು ಪ್ರಯತ್ನ ಮಾಡ್ತಿದ್ದಾರೆ. ಸಂಪ್ರದಾಯದ ಜೊತೆಗೆ ಸಾಮಾಜಿಕ ಮಾಧ್ಯಮ ಬೆಸೆಯಬಹುದು ಎಂದು ಖುಷಿಯಾಯಿತು’ ಎಂದು ಎರಡು ಮಕ್ಕಳ ತಾಯಿ ಪಲ್ಲವಿನಗು ಬೀರಿದರು.

ಸೀತಾಲಕ್ಷ್ಮಿ ಅವರ ಮನೆಯಲ್ಲಿರುವ ಗಾದೆಗೊಂಬೆಗಳು
ಸೀತಾಲಕ್ಷ್ಮಿ ಅವರ ಮನೆಯಲ್ಲಿರುವ ಗಾದೆಗೊಂಬೆಗಳು

ಎಲ್ಲಿಯ ಗೊಂಬೆಗಳಿವು

ಫೇಸ್‌ಬುಕ್‌ನಲ್ಲಿ ‘ಗಾದೆಗೊಂಬೆಗಳು’ ಎಂದು ಜಾಲಾಡಿದಾಗವಂದನೆಗಳು ಬೆಂಗಳೂರಿನ ಬನ್ನೇರಘಟ್ಟ ರಸ್ತೆ ಕ್ಲಾಸಿಕ್ ಅರ್ಚರ್ಡ್ಸ್‌ ನಿವಾಸಿಸೀತಾಲಕ್ಷ್ಮಿ ಅವರ ಫೇಸ್‌ಬುಕ್‌ ಪುಟ ಕಣ್ಣಿಗೆ ಬಿತ್ತು.

ಅದರಲ್ಲಿ ಅವರು ‘ಈ ವರ್ಷದ ಥೀಮ್ - ಕನ್ನಡ ಗಾದೆಗಳು - ಗೊಂಬೆ ನೋಡಿ ಊಹಿಸಬಲ್ಲಿರಾ? This year theme : Kannada Proverbs. Visitors have to guess the proverb or pick a proverb and identify the doll. And yes, they get extra sweet/ chocolate! :)’ ಎಂಬ ಒಕ್ಕಣೆಯ ಜೊತೆಗೆ 37 ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸಾಕಷ್ಟು ಮಂದಿ ಈ ಫೇಸ್‌ಬುಕ್ ಪುಟದಲ್ಲಿಯೇ ಗಾದೆ ಊಹಿಸುವ ಪ್ರಯತ್ನ ಮಾಡಿದ್ದಾರೆ. ಹಲವರು ಈ ಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಕುಟುಂಬ, ಗೆಳೆಯರ ವಾಟ್ಸ್ಯಾಪ್‌ ಗುಂಪುಗಳಿಗೆ ಹರಿಬಿಟ್ಟಿದ್ದಾರೆ.

ಹೀಗೆ ಹೇಳ್ತಾರೆ ಸೀತಾಲಕ್ಷ್ಮಿ...

ನಮ್ಮ ಮನೆಯಲ್ಲಿ ತಲೆತಲಾಂತರಗಳಿಂದ ಗೊಂಬೆ ಇಡುವ ಪದ್ಧತಿ ಇದೆ. ಹೀಗಾಗಿ ನನ್ನಲ್ಲಿ ವೈವಿಧ್ಯಮಯ ಗೊಂಬೆಗಳ ಸಂಗ್ರಹವಿದೆ. ಸಣ್ಣವಳಿದ್ದಾಗಿನಿಂದಲೂ ಎಲ್ಲಾದರೂ ಹೋದಾಗ ಗೊಂಬೆಗಳನ್ನು ಖರೀದಿಸುವ ಹವ್ಯಾಸ. ಮದುವೆಯಾದ ನಂತರ ನವರಾತ್ರಿ ಹಬ್ಬಕ್ಕೆ ಗೊಂಬೆಗಳನ್ನು ಇಡುವ ಪದ್ಧತಿ ಅರಂಭಿಸಿದೆ.

ನನಗೆ ಪ್ರತಿವರ್ಷ ಏನಾದರೂ ವಿಶೇಷವಾಗಿ ಗೊಂಬೆಗಳನ್ನು ಜೋಡಿಸಬೇಕು ಎಂಬುದು ನನ್ನ ಆಸೆ. ಹೀಗಾಗಿ ಪ್ರತಿವರ್ಷ ಆಯಾ ವರ್ಷ ಹೆಚ್ಚು ಪ್ರಚಾರದ ವಿಷಯಗಳ ಮೇಲೆ ಗೊಂಬೆಗಳನ್ನು ಜೋಡಿಸಿಡುತ್ತಿದ್ದೆ. ಹಿಂದೆ ನಟ ರಾಜ್‌ಕುಮಾರ್‌ ಅಪಹರಣ, ಕಾಡಿನಲ್ಲಿ ವೀರಪ್ಪನ್‌, ಒಲಿಂಪಿಕ್ಸ್‌ ಕ್ರೀಡಾಕೂಟ, ಗಣಿ ಹಗರಣ, ಸ್ವಚ್ಛ ಭಾರತ ಅಭಿಯಾನ ಹೀಗೆ ಬೇರೆ ಬೇರೆ ಥೀಮ್‌ ಪ್ರಕಾರ ಗೊಂಬೆ ಜೋಡಿಸಿದ್ದ.

ನನ್ನ ಹತ್ತಿರ ಕಿನ್ನಾಳ, ಚನ್ನಪಟ್ಟಣ, ರಾಜಸ್ತಾನಿ, ಆಂಧ್ರದ ಕೊಂಡಪಲ್ಲಿ, ವಾರಾಣಾಸಿ ಮರದ ಬೊಂಬೆಗಳು ಹೀಗೆ ಬೇರೆ ಬೇರೆ ಪ್ರದೇಶದ ಗೊಂಬೆಗಳು ಇವೆ. ಒಂದು ವರ್ಷ ಈ ಗೊಂಬೆಗಳ ವಿಶೇಷವನ್ನೇ ಪ್ರದರ್ಶನ ಮಾಡಿದ್ದೆ.

ಈ ವರ್ಷ ‘ಗೊಂಬೆ ನೋಡಿ ಗಾದೆ ಊಹಿಸಿ’ ಥೀಮ್‌. ನಮ್ಮ ಮನೆಯಲ್ಲಿ ಮಾತನಾಡುವಾಗ ನಾವು ಹೆಚ್ಚು ಗಾದೆ ಮಾತುಗಳನ್ನು ಬಳಸುತ್ತೇವೆ. ಮಕ್ಕಳಿಗೆ ಅದರ ಅರ್ಥವನ್ನು ಬಿಡಿಸಿ ಹೇಳಬೇಕಾಗುತ್ತದೆ. ಈಗಿನ ಮಕ್ಕಳು ಗಾದೆ ಮಾತುಗಳನ್ನು ಬಳಸಲ್ಲ, ಅವುಗಳ ಮಹತ್ವ ಅವರಿಗೆ ತಿಳಿದೂ ಇಲ್ಲ. ಹಾಗಾಗಿ ಗಾದೆ ಮಾತುಗಳನ್ನು ಗೊಂಬೆಗಳ ಮೂಲಕ ಪರಿಚಯಿಸಬಹುದು ಎಂದು ಈ ಥೀಮ್‌ ಆಯ್ಕೆ ಮಾಡಿಕೊಂಡೆ.

ನನ್ನ ಸಂಗ್ರಹದಲ್ಲಿದ್ದ ಗೊಂಬೆಗಳನ್ನೇ ಇದಕ್ಕೆ ಆಯ್ಕೆ ಮಾಡಿಕೊಂಡೆ. ಪ್ರತಿದಿನ ಆಡು ಮಾತುಗಳಲ್ಲಿ ಬಳಸುವ 35– 40 ಸರಳಗಾದೆಗಳನ್ನು ಪಟ್ಟಿ ಮಾಡಿಕೊಂಡು, ಅದಕ್ಕೆ ತಕ್ಕಂತೆ ಗೊಂಬೆಗಳನ್ನು ಜೋಡಿಸಿದೆ. ಈ ಕೆಲಸಕ್ಕೆ ಎರಡು ದಿನ ಹಿಡಿಯಿತು. ಗಾದೆ ಮಾತುಗಳನ್ನು ಊಹಿಸಲು ಬೇರೆ ಏನೂ ಕ್ಲೂ ಇಟ್ಟಿಲ್ಲ. ಮನೆಗೆ ಬಂದವರಿಗೆ ‘ಗೊಂಬೆ ನೋಡಿ ಗಾದೆ ಊಹಿಸಿ’ ಎಂಬ ಸವಾಲು ನೀಡುತ್ತೇನೆ.

ನಾನು ಗೊಂಬೆಗಳನ್ನು ಜೋಡಿಸಿದ ಮೇಲೆ ನನ್ನ ಸ್ನೇಹಿತರಾದ ಅಮೆರಿಕದಲ್ಲಿರುವ ರಘು ಎಂಬವರಿಗೆ ಫೋಟೊಗಳನ್ನು ಕಳುಹಿಸಿದ್ದೆ. ಅವರು ಅದಕ್ಕೆ ಅಂಕಿಗಳನ್ನು ಹಾಕಿ, ‘ಅಮೆರಿಕ ಕನ್ನಡ ಪುಟ’ದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿಂದ ಆ ಪೋಟೊಗಳು ಎಲ್ಲಾ ಕಡೆ ವೈರಲ್‌ ಆಗಿವೆ.

ಗೊಂಬೆ ನೋಡಿ, ಗಾದೆ ಹೇಳಿ...

ಅಡಿಕೆಗೆ ಹೋದ ಮಾನ... ???
ಅಡಿಕೆಗೆ ಹೋದ ಮಾನ... ???
ಬೆಕ್ಕು ಕಣ್ಮುಚ್ಚಿ...???
ಬೆಕ್ಕು ಕಣ್ಮುಚ್ಚಿ...???
ಚಾಪೆ ಇದ್ದಷ್ಟು...???
ಚಾಪೆ ಇದ್ದಷ್ಟು...???
ಅವನು ಚಾಪೆ ಕೆಳಗೆ ತೂರಿದ್ರೆ, ಇವನು...???
ಅವನು ಚಾಪೆ ಕೆಳಗೆ ತೂರಿದ್ರೆ, ಇವನು...???
ಧರ್ಮಕ್ಕೆ ದಟ್ಟಿ ಕೊಟ್ರೆ...???
ಧರ್ಮಕ್ಕೆ ದಟ್ಟಿ ಕೊಟ್ರೆ...???
ದೂರದ ಬೆಟ್ಟ ...???
ದೂರದ ಬೆಟ್ಟ ...???
ಈಚಲ ಮರದ ಕೆಳಗೆ ...???
ಈಚಲ ಮರದ ಕೆಳಗೆ ...???
ಎಲ್ಲರ ಮನೆ ದೋ...???
ಎಲ್ಲರ ಮನೆ ದೋ...???
ಬಾವಿಯೊಳಗಿನ ಕಪ್ಪೆ ...???
ಬಾವಿಯೊಳಗಿನ ಕಪ್ಪೆ ...???
ಗಿಡವಾಗಿ ಬಗ್ಗದ್ದು ...???
ಗಿಡವಾಗಿ ಬಗ್ಗದ್ದು ...???
ಗುಬ್ಬಿ ಮೇಲೆ ...???
ಗುಬ್ಬಿ ಮೇಲೆ ...???
ನೀರಿನಲ್ಲಿ ಮಾಡಿದ ...???
ನೀರಿನಲ್ಲಿ ಮಾಡಿದ ...???
ಶಂಖದಿಂದ ಬಂದ್ರೇನೇ ...???
ಶಂಖದಿಂದ ಬಂದ್ರೇನೇ ...???
ಸೂರ್ಯಂಗೇ ...???
ಸೂರ್ಯಂಗೇ ...???
ತಾಯಿಗಿಂತ ...??? ಉಪ್ಪಿಗಿಂತ ...???
ತಾಯಿಗಿಂತ ...??? ಉಪ್ಪಿಗಿಂತ ...???
ತಾಯಿಯಂತೆ ...??? ನೂಲಿನಂತೆ ...???
ತಾಯಿಯಂತೆ ...??? ನೂಲಿನಂತೆ ...???
ಊರು ... ಅನ್ನುತ್ತೆ, ಕಾಡು .... ಅನ್ನುತ್ತೆ
ಊರು ... ಅನ್ನುತ್ತೆ, ಕಾಡು .... ಅನ್ನುತ್ತೆ
ರೋಗಿ ಬಯಸಿದ್ದು ... ವೈದ್ಯ ಹೇಳಿದ್ದು ...
ರೋಗಿ ಬಯಸಿದ್ದು ... ವೈದ್ಯ ಹೇಳಿದ್ದು ...
ಸಂಕಟ ಬಂದಾಗ ...???
ಸಂಕಟ ಬಂದಾಗ ...???
...???
...???
ಅಡ್ಡಗೋಡೆ ಮೇಲೆ...???
ಅಡ್ಡಗೋಡೆ ಮೇಲೆ...???

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT