ಸೋಮವಾರ, ಆಗಸ್ಟ್ 15, 2022
27 °C
ಎಫ್‌ಕೆಸಿಸಿಐನಿಂದ ‘ಜರ್ನಿ ಆಫ್‌ ಜಿಎಸ್‌ಟಿ’ ಕಾರ್ಯಕ್ರಮ

ಜಿಎಸ್‌ಟಿ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿ ಕರ್ನಾಟಕ: ಡಾ.ಐ.ಎಸ್‌.ಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯವು ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯ ಅಧ್ಯಕ್ಷ ಡಾ.ಐ.ಎಸ್‌.ಪ್ರಸಾದ್‌ ಹೇಳಿದರು.

ನಗರದಲ್ಲಿ ಮಂಗಳವಾರ ಎಫ್‌ಕೆಸಿಸಿಐನಿಂದ ಆಯೋಜಿಸಿದ್ದ ‘ಜರ್ನಿ ಆಫ್‌ ಜಿಎಸ್‌ಟಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2017ರಲ್ಲಿ ಜಿಎಸ್‌ಟಿ ಜಾರಿಗೆ ಬಂತು. ಸಾಕಷ್ಟು ಚರ್ಚೆ, ವಿರೋಧಗಳ ನಡುವೆಯೂ ರಾಜ್ಯದಲ್ಲಿ ಉತ್ತಮವಾಗಿ ಅನುಷ್ಠಾನಗೊಂಡಿದೆ. ಕೋವಿಡ್‌ ಕಾಲಘಟ್ಟದಲ್ಲಿ ವರ್ಚುವಲ್‌ ಮೂಲಕ ಗ್ರಾಹಕರ ಹಾಗೂ ವಾಣಿಜ್ಯೋದ್ಯಮಿಗಳ ಸಂದೇಹಗಳನ್ನು ತಜ್ಞರು ಪರಿಹರಿಸಿ
ದ್ದರು’ ಎಂದು ಹೇಳಿದರು.

ವರ್ಚುವಲ್ ಮೂಲಕ ಜಿಎಸ್‌ಟಿ ಮಂಡಳಿ ಸದಸ್ಯ ಡಿ.ಪಿ.ನಾಗೇಂದ್ರ ಪ್ರಸಾದ್‌ ಮಾತನಾಡಿ, ‘ದೇಶದಲ್ಲಿ ಜಿಎಸ್‌ಟಿ ಜಾರಿಗೆ ಬಂದು 5 ವರ್ಷಗಳು ಕಳೆದಿವೆ. ಜಾರಿಗೂ ಮೊದಲು ಜಿಎಸ್‌ಟಿ ಮಂಡಳಿಯು 47 ಬಾರಿ ಸಭೆ ನಡೆಸಿತ್ತು. ಜಿಎಸ್‌ಟಿ ಜಾರಿಗೊಳಿಸಿದ್ದು ತೆರಿಗೆ ಸುಧಾ ರಣೆಗಾಗಿ ಅಲ್ಲ. ಉದ್ಯಮದ ಬೆಳವಣಿಗೆ ಹಾಗೂ ಸುಧಾರಣೆಗೆ’ ಎಂದರು.

‘ಸ್ಪರ್ಧಾತ್ಮಕ ಉತ್ಪನ್ನಗಳಿಗೆ ಜಿಎಸ್‌ಟಿ ಮುಖ್ಯ. ಕೆಲವು ಗೊಂದಲಗಳ ನಡುವೆಯೂ ಜಿಎಸ್‌ಟಿ ದೇಶದಲ್ಲಿ ಉತ್ತಮವಾಗಿ ಜಾರಿಯಾಗಿದೆ. ಸರ್ಕಾ ರದ ಆದಾಯಕ್ಕೆ ಜಿಎಸ್‌ಟಿ ಸಂಗ್ರಹ ಬಹಳ ಪ್ರಮುಖ. ಕೋವಿಡ್‌ ಕಾಲದಲ್ಲಿ ಸಂಗ್ರಹದ ಪ್ರಮಾಣ ಕಡಿಮೆ ಆಗಿತ್ತು. ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದ್ದು, ಜಿಎಸ್‌ಟಿ ಸಂಗ್ರಹ ಹೆಚ್ಚುತ್ತಿದೆ’ ಎಂದರು.

ಕರ್ನಾಟಕ ವಲಯದ ಕೇಂದ್ರ ತೆರಿಗೆಯ ಜಿಎಸ್‌ಟಿ ವಿಭಾಗದ ಪ್ರಧಾನ ಮುಖ್ಯ ಆಯುಕ್ತೆ ರಂಜನಾ ಜಹಾ ಮಾತನಾಡಿ, ‘ರಾಜ್ಯವು ತೆರಿಗೆ ಸಂಗ್ರಹದಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೆ, ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿದೆ. ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಏಕರೂಪದ ತೆರಿಗೆಯಿಂದ ಅನುಕೂಲ ಇದೆ. ಆರಂಭಿಕ ಹಂತದಲ್ಲಿ ಗೊಂದಲವಿದ್ದರೂ ಕ್ರಮೇಣ ಬದಲಾವಣೆಗಳನ್ನು ತರಲಾಗಿದೆ. ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಸಮಸ್ಯೆ ಆಗಬಾರದು’ ಎಂದು ಹೇಳಿದರು.

ಕೋವಿಡ್‌ ಬಳಿಕ ಆಟೋಮೊಬೈಲ್‌ ಕ್ಷೇತ್ರದ ವಹಿವಾಟು ಬಿರುಸಾಗಿದೆ. ಕಟ್ಟಡ ಕಾಮಗಾರಿಯೂ ನಡೆಯುತ್ತಿದೆ. ಉದ್ಯಮದ ಬೆಳವಣಿಗೆಗೆ ಪೂರಕ ವಾತಾವರಣವಿದೆ ಎಂದರು.

ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ, ಎಫ್‌ಕೆಸಿಸಿಐನ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಉಪಾಧ್ಯಕ್ಷ ಬಿ.ವಿ.ಗೋಪಾಲರೆಡ್ಡಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು