ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇರ್ ಡ್ರೈಯರ್‌ನಿಂದ ಕೂದಲು ಒಣಗಿಸುತ್ತಿದ್ದಾಗ ಬೆಂಕಿ: ಪೀಠೋಪಕರಣಕ್ಕೂ ಹಾನಿ

Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಫ್ಟ್‌ವೇರ್‌ ಕಂಪನಿಯ ಮಹಿಳಾ ಎಂಜಿನಿಯರೊಬ್ಬರು ಹೇರ್ ಡ್ರೈಯರ್‌ ಬಳಸಿ ತಮ್ಮ ತಲೆಕೂದಲು ಒಣಗಿಸುತ್ತಿದ್ದ ಸಂದರ್ಭದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಈ ಬಗ್ಗೆ ಪೇಯಿಂಗ್ ಗೆಸ್ಟ್ (ಪಿ.ಜಿ) ಕಟ್ಟಡವೊಂದರ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.

‘ಮಹಿಳಾ ಎಂಜಿನಿಯರ್ ಅವರ ನಿರ್ಲಕ್ಷ್ಯದಿಂದ ಪೀಠೋಪಕರಣಗಳಿಗೆ ಹಾನಿ ಆಗಿದೆ’ ಎಂದು ದೂರಿನಲ್ಲಿ ಮಾಲೀಕ ಆರೋಪಿಸಿರುವುದಾಗಿ ಗೊತ್ತಾಗಿದೆ. ದೂರು ಸ್ವೀಕರಿಸಿರುವ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ.

‘ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಮಹಿಳಾ ಎಂಜಿನಿಯರ್ ಉಳಿದುಕೊಂಡಿದ್ದಾರೆ. ಸ್ನಾನ ಮುಗಿಸಿದ್ದ ಅವರು, ಹೇರ್ ಡ್ರೈಯರ್ ಬಳಸಿ ತಲೆಕೂದಲು ಒಣಗಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಹೇರ್ ಡ್ರೈಯರ್‌ನಿಂದ ಬೆಂಕಿ ಹೊತ್ತಿಕೊಂಡಿತ್ತು. ಭಾಗಶಃ ತಲೆಕೂದಲುಗಳು ಸುಟ್ಟಿದ್ದವು. ಭಯದಲ್ಲಿ ಹೇರ್‌ ಡ್ರೈಯರ್ ಎಸೆದಿದ್ದರಿಂದ, ಪೀಠೋಪಕರಣಗಳಿಗೂ ಬೆಂಕಿ ಹೊತ್ತಿಕೊಂಡಿತ್ತು. ಅಕ್ಕ–ಪಕ್ಕದ ಯುವತಿಯರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT