ಮಂಗಳವಾರ, ಅಕ್ಟೋಬರ್ 19, 2021
23 °C

ಖಾದಿ ಬಟ್ಟೆ ಕಲಬೆರಕೆ ತಡೆಗೆ ರಂಗಕರ್ಮಿ ಪ್ರಸನ್ನ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಖಾದಿ ಬಟ್ಟೆಯಲ್ಲಿನ ಕಲಬೆರಕೆಗೆ ತಡೆ ಹಾಕಿ, ಶುದ್ಧ ಕೈಮಗ್ಗ ಉತ್ಪನ್ನಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು’ ಎಂದು ರಂಗಕರ್ಮಿ ಪ್ರಸನ್ನ ಆಗ್ರಹಿಸಿದರು.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶನಿವಾರ ಇಲ್ಲಿ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಖಾದಿ ಮತ್ತು ಕೈಮಗ್ಗ ಎನ್ನುವುದು ಪವಿತ್ರವಾದ ಬ್ರ್ಯಾಂಡ್. ಇದರ ಕಲಬೆರಕೆಯಿಂದ ನೂಲುಗಾರ್ತಿಯರು ಹಾಗೂ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧ್ಯಯನವೊಂದರ ಪ್ರಕಾರ ಶೇ 70ರಷ್ಟು ಖಾದಿ ಬಟ್ಟೆಯು ಕಲಬೆರಕೆಯಿಂದ ಕೂಡಿದೆ. ಇದಕ್ಕೆ ಕಡಿವಾಣ ಹಾಕಿದರೆ ಮಾತ್ರ ಗ್ರಾಮೀಣ ಜನತೆಗೆ ನ್ಯಾಯ ಸಿಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೂ ಮನವಿ ಮಾಡಲಾಗಿದೆ. ಶುದ್ಧ ಖಾದಿ ಅಭಿಯಾನ ಪ್ರಾರಂಭಿಸುವ ಭರವಸೆಯನ್ನು ಅವರು ನೀಡಿದ್ದಾರೆ’ ಎಂದು ತಿಳಿಸಿದರು. 

‘ಕಲಬೆರಕೆ ಖಾದಿ ಬಟ್ಟೆ ಪತ್ತೆಯ ಸಂಬಂಧ ಕನ್ನಡದ ಕೆಲ ಯುವಕರು ‘ಕೋಶಾ’ ಹೆಸರಿನ ನವೋದ್ಯಮ ಪ್ರಾರಂಭಿಸಿ, ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ಈಗ ಕಲಬೆರಕೆ ಕೈಮಗ್ಗ ಬಟ್ಟೆಗಳನ್ನು ಗುರುತಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದಾಗಿ ಇಡೀ ದೇಶದ ಕೋಟ್ಯಾಂತರ ಮಂದಿ ನೂಲುಗಾರ್ತಿಯರು ಹಾಗೂ ನೇಕಾರರ ಬದುಕು ಹಸನಾಗಲಿದೆ’ ಎಂದು ಆಶಾವಾದ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು