ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಪತಿ, ಮನೆಯವರಿಂದ ಕಿರುಕುಳ: ಕ್ರಮಕ್ಕಾಗಿ ಪತ್ನಿ ದೂರು

Published : 11 ಸೆಪ್ಟೆಂಬರ್ 2024, 15:52 IST
Last Updated : 11 ಸೆಪ್ಟೆಂಬರ್ 2024, 15:52 IST
ಫಾಲೋ ಮಾಡಿ
Comments

ಕೆ.ಆರ್.ಪುರ: ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿರುವ ಪತಿ ಮತ್ತು ಅವರ ಮನೆಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂತ್ರಸ್ತೆಯೊಂದಿಗೆ ನೂರಾರು ಸ್ಥಳೀಯರು ವಿಜಿನಾಪುರದ ಕೊತ್ತೂರಿನಿಂದ ರಾಮಮೂರ್ತಿನಗರ ಠಾಣೆವರೆಗೆ ಪ್ರತಿಭಟನೆ ನಡೆಸಿ, ನಂತರ ಪೋಲಿಸರಿಗೆ ದೂರು ನೀಡಿದರು.

ಸಂತ್ರಸ್ತೆ ತಸ್ಲಿಂ ಭಾನು ಮಾತನಾಡಿ, ‘ನನಗೆ ವಿಜಿನಾಪುರದ ನಿವಾಸಿ ಸದ್ದಾಂ ಹುಸೇನ್‌ ಎಂಬಾತನೊಂದಿಗೆ ವಿವಾಹವಾಗಿದೆ. ಮದುವೆ ಆದಾಗಿನಿಂದ ನನ್ನ ಪತಿ ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾನೆ. ಪತಿ ಕೆಲಸಕ್ಕೆ ಹೋದಾಗ ನನ್ನ ಮಾವ ಮೈಕೈ ಮುಟ್ಟಿ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಈ ಬಗ್ಗೆ ಅತ್ತೆ ಮತ್ತು ಪತಿಗೆ ತಿಳಿಸಿದಾಗ ನಿನ್ನನ್ನು ದುಡ್ಡು ಕೊಟ್ಟು ಖರೀದಿಸಿಕೊಂಡು ಬಂದಿದ್ದೇವೆ. ನಿಮ್ಮ ಮಾವ ಹೇಳಿದಂತೆ ಕೇಳು, ಇಲ್ಲದಿದ್ದರೆ ತವರು ಮನೆಗೆ ಹೋಗು’ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ, ಮಾವ, ಪತಿ ಹಾಗೂ ಅವರ ಮನೆಯವರು ನನ್ನನ್ನು ಥಳಿಸಿ, ನಿತ್ಯ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಅವರ ವಿರುದ್ಧ ದೂರು ದಾಖಲಿಸಿದ್ದೆ. ಆದರೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ನನ್ನ ಮಾವ, ಪತಿಯಿಂದ ರಕ್ಷಣೆ ನೀಡಿ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದರು.

ಎಫ್‌ಐಆರ್ ದಾಖಲು: ಸಂತ್ರಸ್ಥೆಯ ದೂರು ಸ್ವೀಕರಿಸಿದ ಪೊಲೀಸರು ಸಂಜೆಯ ವೇಳೆಗೆ, ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT