ಗುರುವಾರ , ಅಕ್ಟೋಬರ್ 22, 2020
22 °C

'ಸಂಸದ್ ಉದ್ಯೋಗ ಮಿತ್ರ' ಪೋರ್ಟಲ್‍ಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಫಿಡಿಲಿಟಸ್ ಕಾರ್ಪ್, ಶಿಲ್ಪಾ ಫೌಂಡೇಷನ್ ಹಾಗೂ ಆ್ಯಕ್ಟ್ ಫೌಂಡೇಷನ್ ಸಹಯೋಗದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ 'ಸಂಸದ್ ಉದ್ಯೋಗ ಮಿತ್ರ' ಎಂಬ ಪೋರ್ಟಲ್ ಆರಂಭಿಸಲಾಗಿದೆ.

ಯುವಕ, ಯುವತಿಯರು ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯಲು ಈ ಪೋಟರ್ಲ್‌ ನೆರವಾಗಲಿದೆ. 6 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.

ಆಸಕ್ತರು https://tejasvisurya.in/sansad_udyoga_mitra/ ಪೋರ್ಟಲ್ ನಲ್ಲಿ ತಮ್ಮ ಬಯೋಡೇಟಾ, ಶೈಕ್ಷಣಿಕ ವಿವರಗಳನ್ನು ಅಪ್‍ಲೋಡ್ ಮಾಡಬಹುದು. ರಾಜ್ಯದಾದ್ಯಂತ ಉದ್ಯೋಗಗಳ ಲಭ್ಯತೆಯ ಮಾಹಿತಿ ಅಭ್ಯರ್ಥಿಗಳಿಗೆ ಸುಲಭವಾಗಿ ಸಿಗಲಿದೆ.

ಪೋರ್ಟಲ್ ಉದ್ಘಾಟಿಸಿ ಮಾತನಾಡಿದ ತೇಜಸ್ವಿ ಸೂರ್ಯ,'ಪ್ರತಿಷ್ಠಿತ ಕಂಪನಿಗಳು, ಸರ್ಕಾರಿ (ಸ್ಕಿಲ್ ಇಂಡಿಯಾ) ಯೋಜನೆಗಳು ಹಾಗೂ ಉದ್ಯೋಗಾಕಾಂಕ್ಷಿಗಳ ನಡುವೆ ಈ ಪೋರ್ಟಲ್ ಸೇತುವೆಯಂತೆ ಕಾರ್ಯನಿರ್ವಹಿಸಲಿದೆ' ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು