ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್ ನಿರ್ವಹಣೆ ಇಸ್ಕಾನ್‌ಗೆ?

ಗುತ್ತಿಗೆದಾರರ ಬಗ್ಗೆ ಪಾಲಿಕೆಗೆ ಇಲ್ಲ ತೃಪ್ತಿ
Last Updated 26 ಮೇ 2022, 19:28 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಯನ್ನು ಇಸ್ಕಾನ್‌ಗೆ ವಹಿಸಲು ಉತ್ಸುಕವಾಗಿರುವ ಬಿಬಿಎಂಪಿ, ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಸಿದೆ.

‘ಹಾಲಿ ಗುತ್ತಿಗೆದಾರರ ಬಗ್ಗೆ ಪಾಲಿಕೆಗೆ ತೃಪ್ತಿ ಇಲ್ಲ. ಆದ್ದರಿಂದ ಈ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು) ತುಳಸಿ ಮದ್ದಿನೇನಿ ಅವರು ಗುರುವಾರಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಟೆಂಡರ್ ಕರೆದು ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ವಹಿಸಿದಾಗ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ. ಈ ಕ್ಯಾಂಟೀನ್‌ ಗಳನ್ನು ಉದಾತ್ತ ಉದ್ದೇಶಕ್ಕಾಗಿ ತೆರೆಯಲಾಗಿದ್ದು, ಬಿಬಿಎಂಪಿ ಜತೆ ನಿಸ್ವಾರ್ಥವಾಗಿ ಕೆಲಸ ಮಾಡುವ ಪಾಲುದಾರರ ಅಗತ್ಯವಿದೆ. ಪೌರ ಕಾರ್ಮಿಕರು, ಶಾಲಾ ಮಕ್ಕಳಿಗೆ ಇಸ್ಕಾನ್ ಆಹಾರ ಪೂರೈಸುತ್ತಿರುವ ವಿಧಾನ ನೋಡಿದರೆ ಉತ್ತಮವಾಗಿ ನಿರ್ವಹಿಸುತ್ತದೆ ಎಂಬ ನಂಬಿಕೆ ಇದೆ. ಫಲಾನುಭವಿಗಳು ಉಪಾಹಾರಕ್ಕೆ ₹5 ಮತ್ತು ಮಧ್ಯಾಹ್ನದ ಊಟಕ್ಕೆ ₹10 ಪಾವತಿಸಲಿದೆ. ಹೆಚ್ಚುವರಿ ಹೊರೆಯನ್ನು ಬಿಬಿಎಂಪಿ ಭರಿಸಲಿದೆ’ ಎಂದರು.

‘ಬೆಳ್ಳುಳ್ಳಿ, ಈರುಳ್ಳಿ ಬಳಕೆಯನ್ನು ಇಸ್ಕಾನ್ ನಿರಾಕರಿಸಿರುವುದರಿಂದ ಆಹಾರ ರುಚಿ ಇರುವುದಿಲ್ಲ ಎಂಬ ಮಾತುಗಳೂ ಇವೆ. ಆದರೆ ರುಚಿ ಮತ್ತು ಗುಣಮಟ್ಟದ ಆಹಾರ ನೀಡುವ ಭರವಸೆಯನ್ನು ಇಸ್ಕಾನ್ ನೀಡಿದೆ. ಕ್ಯಾಂಟೀನ್ ಹೆಸರು ಬದಲಾವಣೆಯ ಪ್ರಸ್ತಾವನೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT