ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಸಾಧಕರಿಗೆ ಇನ್ಫೊಸಿಸ್‌ ಪ್ರಶಸ್ತಿ

Last Updated 15 ನವೆಂಬರ್ 2022, 19:28 IST
ಅಕ್ಷರ ಗಾತ್ರ

ಬೆಂಗಳೂರು: ನಗರದಪ್ರೊ. ಮಹೇಶ್‌ಕಾಕಡೆಹಾಗೂಪ್ರೊ. ಸುಧೀರ್‌ಕೃಷ್ಣಸ್ವಾಮಿಸೇರಿ ಆರು ಸಾಧಕರಿಗೆ ‘ಇನ್ಫೊಸಿಸ್‌ ಪ್ರಶಸ್ತಿ–2022’ ಪ್ರಕಟಿಸಲಾಗಿದೆ.

ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌ ಟ್ರಸ್ಟಿಗಳಾದಕ್ರಿಸ್ಗೋಪಾಲಕೃಷ್ಣನ್, ನಾರಾಯಣ ಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಎಂಜಿನಿಯರಿಂಗ್– ಗಣಕ ವಿಜ್ಞಾನ, ಮಾನವಿಕ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ, ಸಮಾಜ ವಿಜ್ಞಾನ ವಿಭಾಗದ ಪ್ರಶಸ್ತಿಪುರಸ್ಕೃತರನ್ನುಮಂಗಳವಾರ ಪ್ರಕಟಿಸಿದರು. ಪ್ರಶಸ್ತಿಯು ಚಿನ್ನದ ಪದಕ, ಸ್ಮರಣಿಕೆ ಹಾಗೂ ಸುಮಾರು ₹81 ಲಕ್ಷ (ಒಂದು ಲಕ್ಷ ಡಾಲರ್‌) ನಗದು ಬಹುಮಾನ ಒಳಗೊಂಡಿದೆ.

ಮಹೇಶ್ಕಾಕಡೆ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರೊಫೆಸರ್‌ ಆಗಿದ್ದು, ಬೀಜಗಣಿತಸಂಖ್ಯಾಸೂತ್ರದಲ್ಲಿನಸಾಧನೆಗೆ ಗಣಿತ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ.

ಬೆಂಗಳೂರಿನನ್ಯಾಷನಲ್ಲಾಸ್ಕೂಲ್ಆಫ್ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಸುಧೀರ್ಕೃಷ್ಣಸ್ವಾಮಿಅವರುಸುಪ್ರೀಂಕೋರ್ಟ್‌ 1973ರಲ್ಲಿ ರೂಪಿಸಿದ ‘ಸಂವಿಧಾನದ ಮೂಲ ಸ್ವರೂಪ’ದ ತಾತ್ವಿಕತೆ ಬಗ್ಗೆ ಮಾಡಿರುವ ಬರವಣಿಗೆಗಳಿಗೆ ಮಾನವಿಕ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.

ಎಂಜಿನಿಯರಿಂಗ್ಮತ್ತುಕಂಪ್ಯೂಟರ್ವಿಜ್ಞಾನವಿಭಾಗದಲ್ಲಿ ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಂಶೋಧನೆ ಮತ್ತು ಅಭಿವೃದ್ಧಿವಿಭಾಗದಡೀನ್ ಸುಮನ್ಚಕ್ರವರ್ತಿ ಅವರಿಗೆ ಪ್ರಶಸ್ತಿ ಸಂದಿದೆ. ದ್ರವ ವಿಜ್ಞಾನ ಹಾಗೂಎಲೆಕ್ಟ್ರೊಮೆಕ್ಯಾನಿಕ್ಸ್‌ಕ್ಷೇತ್ರಗಳಲ್ಲಿ ಸಂಶೋಧನೆಗಳ ಮೂಲಕ ರೋಗ ಪತ್ತೆಗೆ ಕಡಿಮೆ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಇವರುಆವಿಷ್ಕರಿಸಿದ್ದಾರೆ.

ಮುಂಬೈನಟಾಟಾಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ರಿಸರ್ಚ್‌ ಸಂಸ್ಥೆಯಲ್ಲಿನ್ಯೂರೊಬಯಾಲಜಿಪ್ರೊಫೆಸರ್ವಿದಿತಾವೈದ್ಯ ಅವರಿಗೆಜೀವವಿಜ್ಞಾನವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಆತಂಕ,ಖಿನ್ನತೆಯಂತಹಮಾನಸಿಕ ಸಮಸ್ಯೆಗಳಿಗೆ ಕಾರಣವಾಗುವ ಮೆದುಳಿನಕ್ರಿಯೆಗಳನ್ನುಅರ್ಥಮಾಡಿಕೊಳ್ಳುವಲ್ಲಿಅವರು ನೀಡಿರುವ ಕೊಡುಗೆಗೆ ಈ ಪ್ರಶಸ್ತಿ ನೀಡಲಾಗಿದೆ.

ಪುಣೆಯನ್ಯಾಷನಲ್ಸೆಂಟರ್ಫಾರ್ರೇಡಿಯೊಆಸ್ಟ್ರಾನಮಿಯಪ್ರೊಫೆಸರ್ನಿಸ್ಸಿಂಕಾನೇಕರ್ಅವರಿಗೆಭೌತವಿಜ್ಞಾನದಲ್ಲಿ ನಕ್ಷತ್ರಗಳುಅತ್ಯಂತಗರಿಷ್ಠ ಪ್ರಮಾಣದಲ್ಲಿ ಸೃಷ್ಟಿಯಾದಕಾಲಘಟ್ಟದಗ್ಯಾಲಕ್ಸಿಗಳಕುರಿತ ಅಧ್ಯಯನಕ್ಕಾಗಿಈಗೌರವಸಂದಿದೆ.

ಯೇಲ್ವಿಶ್ವವಿದ್ಯಾಲಯದ ಆರ್ಥಿಕ ಬೆಳವಣಿಗೆ ಕೇಂದ್ರದ ನಿರ್ದೇಶಕಿ ರೋಹಿಣಿಪಾಂಡೆಅವರಿಗೆ ಸಮಾಜ ವಿಜ್ಞಾನ ವಿಭಾಗದ ಪ್ರಶಸ್ತಿ ಸಂದಿದೆ. ಆಡಳಿತ ಮತ್ತು ಉತ್ತರದಾಯಿತ್ವ, ಮಹಿಳೆಯರ ಸಬಲೀಕರಣ, ಬಡವರ ಬದುಕಿನಲ್ಲಿ ಸಾಲದ ಮಹತ್ವ,ಪರಿಸರವಿಷಯಗಳ ಕುರಿತು ಅವರು ನಡೆಸಿದ ಸಂಶೋಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ಪ್ರಕಟಿಸಲಾಗಿದೆ.

ನಾರಾಯಣ ಮೂರ್ತಿ ಮಾತನಾಡಿ, ‘ವಿಜ್ಞಾನ ಮತ್ತು ಸಂಶೋಧನೆ ಮೇಲೆ ಸರ್ಕಾರ ಹಾಗೂ ಖಾಸಗಿ ವಲಯ ಹೆಚ್ಚು ಹೂಡಿಕೆ ಮಾಡಬೇಕಾದ ತುರ್ತು ಇದೆ’ ಎಂದರು.

ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌ ಟ್ರಸ್ಟಿಗಳಾದ ಶ್ರೀನಾಥ್ ಬಾಟ್ನಿ, ಕೆ. ದಿನೇಶ್, ಮೋಹನದಾಸ್ ಪೈ, ಸಲೀಲ್‌ ಪರೇಖ್ ಮತ್ತು ಎಸ್.ಡಿ. ಶಿಬುಲಾಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT