ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಿಷ್ಕಾರಗಳು ಪ್ರಗತಿಗೆ ಪೂರಕವಾಗಿರಲಿ: ನಾರಾಯಣಮೂರ್ತಿ

Last Updated 15 ಜುಲೈ 2022, 4:31 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಜ್ಞಾನ ಮತ್ತು ತಂತ್ರ ಜ್ಞಾನ ಕ್ಷೇತ್ರದಲ್ಲಿ ದೇಶವು ಅದ್ವಿತೀಯ ಪ್ರಗತಿ ಸಾಧಿಸುತ್ತಿದೆ. ಈ ಕ್ಷೇತ್ರಗಳಲ್ಲಿ ನಡೆ ಯುವ ಆವಿಷ್ಕಾರ ಗಳು ದೇಶದ ಪ್ರಗತಿಗೆ ಪೂರಕ ವಾಗಿರಬೇಕು’ಎಂದು ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ತಿಳಿಸಿದರು.

ಇನ್ಫೊಸಿಸ್ ವಿಜ್ಞಾನ ಪ್ರತಿಷ್ಠಾನವು ಜಯನಗರದಲ್ಲಿ ಸ್ಥಾಪಿಸಿರುವ ನೂತನ ಕಚೇರಿಯನ್ನು ಆನ್‌ಲೈನ್ ವೇದಿಕೆಯ ಮೂಲಕ ಗುರುವಾರ ಉದ್ಘಾಟಿಸಿದ ಅವರು, ‘ದುರ್ಬಲ ವರ್ಗದವರಿಗೆ ಅಗತ್ಯ ಸೌಲಭ್ಯ ಒದಗಿಸುವ ಜತೆಗೆ ಅಪೌಷ್ಟಿಕತೆ ಸೇರಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಾಗ ದೇಶ ಪ್ರಗತಿ ಹೊಂದಲಿದೆ. ಅನಾರೋಗ್ಯ, ಅಪೌಷ್ಟಿಕತೆ ಒಳಗೊಂಡಂತೆ ವಿವಿಧ ಸಮಸ್ಯೆಗಳ ವಿರುದ್ಧ ಹೋರಾಡಲು ಸಂಶೋಧಕ ಯೋಧರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

‘ನಾವು ರಾಕೆಟ್ ಮತ್ತು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದೇವೆ. ಉಕ್ಕಿನ ಸ್ಥಾವರಗಳು, ವಿದ್ಯುತ್ ಸ್ಥಾವರಗಳು ಮತ್ತು ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿದ್ದೇವೆ. ಕೋವಿಡ್ ಲಸಿಕೆಗಳನ್ನು ತಯಾರಿಸಿದ್ದೇವೆ. ಹೃದಯ ಮತ್ತು ಮೂತ್ರಪಿಂಡದ ಕಸಿ ನಡೆಸುತ್ತೇವೆ. ಆದರೂ ದೇಶದ ಎಲ್ಲ ಜನರಿಗೆ ಶಿಕ್ಷಣ, ಆರೋಗ್ಯ, ಆಹಾರ ಮತ್ತು ಆಶ್ರಯ ಒದಗಿಸುವ ವಿಚಾರದಲ್ಲಿ ಸಾಕಷ್ಟು ದೂರವಿದ್ದೇವೆ’ ಎಂದು ತಿಳಿಸಿದರು.

‘ಪ್ರತಿಷ್ಠಾನದ ನೂತನ ಕಟ್ಟಡವು ವೃತ್ತಿಪರರಿಗಾಗಿ ಕಚೇರಿಗಳನ್ನು ಹೊಂದಿದೆ. ಸಮ್ಮೇಳನ ಕೊಠಡಿಗಳು, 100 ಆಸನಗಳ ಸಭಾಂಗಣ ಸೇರಿ ಹಲವು ಸೌಲಭ್ಯಗಳನ್ನು ಒಳಗೊಂಡಿದೆ’ ಎಂದು ತಿಳಿಸಿದರು.

ಬಹುಮಾನ ಸ್ಥಾಪನೆ

ಪ್ರತಿಷ್ಠಾನದ ಟ್ರಸ್ಟಿ ಕ್ರಿಸ್ ಗೋಪಾಲಕೃಷ್ಣನ್, ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆವಿಷ್ಕಾರ ನಡೆಸಲು ಬೆಂಗಳೂರಿನಲ್ಲಿ ಉತ್ತಮ ವಾತಾವಣರವಿದೆ. ಸಂಶೋಧಕರನ್ನು ಪ್ರೋತ್ಸಾಹಿಸಲು ಪ್ರತಿಷ್ಠಾನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಷ್ಠಾನದ ವಿವಿಧ ಯೋಜನೆಗಳಲ್ಲಿ ಪಾಲ್ಗೊಳ್ಳಬಹುದು. ಯುವ ಸಂಶೋಧಕರನ್ನು ಪ್ರೊತ್ಸಾಹಿಸಲು 2009ರಿಂದ ನೈಸರ್ಗಿಕ ವಿಜ್ಞಾನ, ಎಂಜಿನಿಯರಿಂಗ್ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಬಹುಮಾನಗಳನ್ನು ಸ್ಥಾಪಿಸಿದ್ದೇವೆ’ ಎಂದು ಎನ್.ಆರ್.ನಾರಾಯಣಮೂರ್ತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT