ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರ ಹಿತಾಸಕ್ತಿ ರಕ್ಷಣೆ: ಹೈಕೋರ್ಟ್‌ಗೆ ಐಆರ್‌ಡಿಎ ವಿವರಣೆ

Last Updated 18 ಸೆಪ್ಟೆಂಬರ್ 2020, 5:56 IST
ಅಕ್ಷರ ಗಾತ್ರ

ಬೆಂಗಳೂರು:ಹಿರಿಯ ನಾಗರಿಕರ ಹಿತಾಸಕ್ತಿ ಕಾಪಾಡಲು ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಹೈಕೋರ್ಟ್‌ಗೆ ವಿಮಾ ನಿಯಂತ್ರಣಾ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ವಿವರಣೆ ನೀಡಿದೆ.

ಆರೋಗ್ಯ ವಿಮಾ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಐಆರ್‌ಡಿಎಗೆ ನೋಟಿಸ್ ನೀಡಿತ್ತು.

ಈ ಸಂಬಂಧ ವಿವರಣೆ ಸಲ್ಲಿಸಿರುವ ಐಆರ್‌ಡಿಎ, ‘ಹಿರಿಯ ನಾಗರಿಕರಿಗೆ ಉಚಿತವಾಗಿ ಪಾಲಿಸಿ ಒದಗಿಸುವುದು ಕಾರ್ಯಸಾಧ್ಯವಲ್ಲ. ಜನರಿಂದಲೇ ವಿಮಾ ಕಂತು ಪಾವತಿಸಿಕೊಂಡು ಆರೋಗ್ಯ ಏರುಪೇರಾದವರಿಗೆ ಪಾವತಿಸುವ ಪದ್ಧತಿಆಧರಿಸಿಆರೋಗ್ಯ ವಿಮೆಯ ಸಂಪೂರ್ಣ ವ್ಯವಹಾರ ನಿಂತಿದೆ. ಆದ್ದರಿಂದ ಪಾಲಿಸಿಗಳನ್ನು ಉಚಿತವಾಗಿ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದು ಹೇಳಿದೆ.

‘ಹಿರಿಯ ನಾಗರಿಕರಿಗೆ ಕಡಿಮೆ ಪ್ರೀಮಿಯಂ ಪಾವತಿಸಲು ಅನುಮತಿ ನೀಡಿದರೆ, ವ್ಯತ್ಯಾಸದ ಮೊತ್ತವನ್ನು ಕಿರಿಯರಿಂದ ಸರಿದೂಗಿಸಬೇಕಾಗುತ್ತದೆ. ಆದರೆ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆರೋಗ್ಯ ವಿಮಾ ಪಾಲಿಸಿಗಳನ್ನು ಪಡೆಯುವುದು ತೀರಾ ಕಡಿಮೆ’ ಎಂದು ವಿವರಿಸಿದೆ.

‘30 ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳೊಂದಿಗೆ ‘ಕೊರೊನಾ ಕವಚ್’ ಹೆಸರಿನ ಪಾಲಿಸಿ ಜಾರಿಗೆ ತರಲಾಗಿದೆ. 65 ವರ್ಷದವರಿಗೂವಿಮೆ ನೀಡಲಾಗುತ್ತಿದೆ’ ಎಂದು ವಿವರಿಸಿದೆ.

‘ಆರೋಗ್ಯ ಸಂಜೀವಿನಿ’ ವಿಮೆಯಡಿ ವಯಸ್ಸು ಕಡಿಮೆ ಇದ್ದವರಿಗೆ ಹೆಚ್ಚು ಪರಿಹಾರ ನೀಡುತ್ತಿದೆ. ‘ಕೊರೊನಾ ಕವಚ’ ವಿಮೆಯನ್ನು ಒಂದು ಕುಟುಂಬಕ್ಕೆ ನೀಡಲಾಗುತ್ತದೆ. ಆದರೆ, ವ್ಯಕ್ತಿ 65 ವರ್ಷದ ದಾಟಿದ್ದರೆ ಪ್ರತ್ಯೇಕ ವಿಮೆ ನೀಡಲಾಗುತ್ತಿಲ್ಲ. ಇದು ತಾರತಮ್ಯ ನೀತಿಯಾಗಿದೆ’ ಎಂದು ಅರ್ಜಿದಾರರು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT