ಸೋಮವಾರ, ಜುಲೈ 26, 2021
28 °C
ವೈದ್ಯರು, ಪೊಲೀಸರಿಗೆ 75 ದಿನಗಳ ಕಾಲ ನಿರಂತರ

ಈಶ ಪ್ರತಿಷ್ಠಾನ: ಆಹಾರ ಪೊಟ್ಟಣ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಕಳೆದ 75 ದಿನಗಳಿಂದ ಈಶ ಪ್ರತಿಷ್ಠಾನ ರಾಜ್ಯದ 11 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಕಾರ್ಯದಲ್ಲಿ ತೊಡಗಿದ್ದ ವೈದ್ಯಕೀಯ ಸಿಬ್ಬಂದಿಗೆ 7.34 ಲಕ್ಷ ಆಹಾರ, ಬಿಸ್ಕತ್ ಪೊಟ್ಟಣ, ಸ್ನ್ಯಾಕ್ಸ್‌ ಮತ್ತು ತಂಪು ಪಾನಿಯ ವಿತರಿಸಿದೆ. 

ಬೆಂಗಳೂರು, ಮೈಸೂರು, ಮಂಡ್ಯ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿನ ಆಸ್ಪತ್ರೆಗಳಲ್ಲಿ ಇವುಗಳನ್ನು ವಿತರಿಸಲಾಗಿದೆ ಎಂದು ಈಶ ಪ್ರತಿಷ್ಠಾನದ ರಾಘವೇಂದ್ರ ಶಾಸ್ತ್ರಿ ತಿಳಿಸಿದ್ದಾರೆ.

ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್‌ ಸೋಂಕು ತಾರಕಕ್ಕೆ ಏರಿತ್ತು. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಅತ್ಯಂತ ಮಾನಸಿಕ ಒತ್ತಡಕ್ಕೂ ಒಳಗಾಗಿದ್ದರು. ಕೆಲವರು 18 ಗಂಟೆಗಳವರೆಗೂ ಕೆಲಸ ಮಾಡುತ್ತಿದ್ದರು. ಪಿಪಿಇ ಸೂಟ್‌ಗಳು,  ಕೈಗವುಸು ಮತ್ತು ಮುಖ ಗವುಸುಗಳನ್ನು ಕೋವಿಡ್‌ ಯೋಧರಿಗೆ ವಿತರಿಸಲಾಯಿತು. ಸದ್ಗುರು
ಅವರು ಕೋವಿಡ್‌ ಸಮರದಲ್ಲಿ ತೊಡಗಿದ್ದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದ್ದರು. ಅದರ ಪ್ರಕಾರವೇ ಕಾರ್ಯನಿರ್ವಹಿಸಲಾಗಿದೆ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು