ಶನಿವಾರ, ಜುಲೈ 31, 2021
27 °C

ಜಲ ಋಷಿ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಸಂರಕ್ಷಣೆ ಕೈಗೊಳ್ಳಲು ಗ್ರಾಹಕರನ್ನು ಉತ್ತೇಜಿಸುವ ಸಲುವಾಗಿ ಜಲಮಂಡಳಿ ನೀಡುತ್ತಿರುವ ‘ಜಲ ಋಷಿ’ ಪುರಸ್ಕಾರಕ್ಕೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಜು.31ರವರೆಗೆ ವಿಸ್ತರಿಸಲಾಗಿದೆ.

ಗ್ರಾಹಕರು ಕೈಗೊಂಡಿರುವ ಮಳೆನೀರು ಸಂಗ್ರಹ ವ್ಯವಸ್ಥೆ, ನೀರಿನ ಸದ್ಬಳಕೆ ಹಾಗೂ ವಾಣಿಜ್ಯ ಕಟ್ಟಡಗಳು, ಹೋಟೆಲ್‌ಗಳು, ಉಪಾಹಾರದರ್ಶಿನಿಗಳು, ಕೈಗಾರಿಕೆಗಳು, ಸರ್ಕಾರಿ ಕಟ್ಟಡಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರಿನ ಮರುಬಳಕೆ ಮುಂತಾದ ನೀರಿನ ಸಂರಕ್ಷಣಾ ಕ್ರಮಗಳನ್ನು ಗುರುತಿಸಿ ಜಲಮಂಡಳಿ ಈ ಪುರಸ್ಕಾರ ನೀಡಲಿದೆ.

ಮಾಹಿತಿಗಾಗಿ ಜಲಮಂಡಳಿಯ ವೆಬ್‌ಸೈಟ್‌ www.bwssb.gov.in ನೋಡಬಹುದು ಅಥವಾ http:/49.50.101.196:82/. ಈ ಲಿಂಕ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. 

ಸಂಪರ್ಕ: 080 22945114

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು