ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವಾ ಬೈಕ್‌ ಷೋರೂಮ್‌ ಆರಂಭ

ಇದು ದೇಶದ 27ನೇ ಜಾವಾ ಮಳಿಗೆ
Last Updated 31 ಜನವರಿ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಇನ್ಫೆಂಟ್ರಿ ರಸ್ತೆಯ ಸಫಿನಾ ಮೋಟರ್ಸ್‌ ಸಂಸ್ಥೆಯು ಕ್ಲಾಸಿಕ್‌ ಲೆಜೆಂಡ್ಸ್‌ನ ಜಾವಾ ಮೋಟರ್‌ಸೈಕಲ್‌ ಮಾರಾಟದ ಡೀಲರ್‌ಷಿಪ್‌ ಪಡೆದುಕೊಂಡಿದ್ದು, ಹೊಸ ಷೋರೂಮ್‌ ಅನ್ನು ಗುರುವಾರ ಆರಂಭಿಸಲಾಯಿತು. ಇದು ನಗರದ ನಾಲ್ಕನೆಯ ಹಾಗೂ ದೇಶದ 27ನೇ ಜಾವಾ ಷೋರೂಮ್‌ ಆಗಿದೆ.

ಜಾವಾ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ರುಸ್ತುಮ್‌ಜಿ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬೋಮನ್‌ ಇರಾನಿ ಷೋರೂಮ್‌ ಉದ್ಘಾಟಿಸಿದರು. ‘ಜಾವಾಕ್ಕೆ ದೊಡ್ಡ ಅಭಿಮಾನಿಗಳ ಪಡೆಯೇ ಇದೆ. ಕಳೆದ ನವೆಂಬರ್‌ನಲ್ಲಿ ಈ ಬೈಕ್ಅನ್ನು ಮತ್ತೆ ಭಾರತಕ್ಕೆ ತಂದದ್ದು ನಮ್ಮ ಪಾಲಿಗೆ ಒಂದು ಐತಿಹಾಸಿಕ ಕ್ಷಣ’ ಎಂದು ಹೆಮ್ಮೆಯಿಂದ ಹೇಳಿದರು. ‘ಗ್ರಾಹಕರೊಂದಿಗೆ ಸದಾ ಮಧುರ ಬಾಂಧವ್ಯ ಹೊಂದಿರುವಂತಹ ವ್ಯವಸ್ಥೆಯನ್ನು ಕಲ್ಪಿಸಲಿದ್ದೇವೆ’ ಎಂದು ತಿಳಿಸಿದರು.

ಡೀಲರ್‌ಷಿಪ್‌ ಪಡೆದ ಫಿರೋಜ್‌ ಸತ್ತಾರ್‌ ಸೇಠ್‌ ಹಾಜರಿದ್ದರು.

ಈ ಷೋರೂಮ್‌ ಒಂದು ‘ಬೈಕರ್‌ ಕೆಫೆ’ಯಾಗಿದ್ದು, ಬೈಕ್‌ ಪ್ರಿಯರಿಗೆ ಜಾವಾದ ದಂತಕಥೆಗಳನ್ನೆಲ್ಲ ಹೇಳಲಿದೆ. ಈ ಬೈಕ್‌ ರೂಪುಗೊಂಡ ಬಗೆ, ಅದು ರಾಜನಾಗಿ ಮೆರೆದ ಸುವರ್ಣ ಯುಗದ ಹತ್ತಾರು ರಸವತ್ತಾದ ವಿವರಗಳು ಬಂದವರನ್ನು ತಣಿಸಲಿವೆ.

ಹೊಸ ತಲೆಮಾರಿನ ಜಾವಾ ಮೋಟಾರ್‌ಸೈಕಲ್‌ನ ಮೊದಲ ಬೈಕ್‌ಗೆ ’ಜಾವಾ’ ಎಂದೇ ಹೆಸರಿಸಲಾಗಿದೆ. 1970–80ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಗುಡುಗುಡತ್ತಿದ್ದ ಅದೇ ಹಿಂದಿನ ಜಾವಾ ಬೈಕ್‌ಗೆ ಬಹುವಾಗಿ ಹೋಲುತ್ತದೆ.

ಜಾವಾ ಮತ್ತು ಜಾವಾ–42 ಬೈಕ್‌ಗಳ ಬೆಲೆ ಕ್ರಮವಾಗಿ ₹ 1.67 ಲಕ್ಷ ಹಾಗೂ ₹ 1.58 ಲಕ್ಷ (ಎಕ್ಸ್‌ ಷೋರೂಮ್‌) ಇದೆ. ಈ ಷೋರೂಮ್‌ನಲ್ಲಿ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT