ಭಾನುವಾರ, ಫೆಬ್ರವರಿ 28, 2021
31 °C
ನಿಧನ ವಾರ್ತೆ

ಪತ್ರಕರ್ತ ವಿಜೇಶ್‌ ಕಾಮತ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ರಕರ್ತ, ಮಲ್ಲೇಶ್ವರದ ಗಾಯತ್ರಿ ನಗರದ ನಿವಾಸಿ ವಿಜೇಶ್‌ ಕಾಮತ್‌ (46) ಬುಧವಾರ ರಾತ್ರಿ ನಿಧನರಾದರು.

ಅವಿವಾಹಿತರಾಗಿದ್ದ ವಿಜೇಶ್‌, ಬಹಳ ವರ್ಷಗಳ ಹಿಂದೆಯೇ ತಂದೆಯನ್ನು ಕಳೆದುಕೊಂಡಿದ್ದರು. ಅವರ ತಾಯಿ ಕೂಡಾ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ತಂದೆ– ತಾಯಿಗೆ ವಿಜೇಶ್‌ ಒಬ್ಬನೇ ಪುತ್ರ.

ಆರೋಗ್ಯ ಹದಗೆಟ್ಟಿದ್ದ ಅವರನ್ನು ಬುಧವಾರ ಸಂಜೆ ಫೋರ್ಟಿಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ನಿಧನರಾಗಿದ್ದರು. ಮೃತದೇಹವನ್ನು ಎಂಎಸ್‌ ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು