ಮಂಗಳವಾರ, ಜನವರಿ 28, 2020
29 °C

ಮೂರು ನಿಮಿಷದಲ್ಲಿ 15 ಕಡುಬು ತಿಂದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೀಣ್ಯ ದಾಸರಹಳ್ಳಿ (ಬೆಂಗಳೂರು): ಮಲೆನಾಡು ಮಿತ್ರವೃಂದ ಸಂಘದ ಆಶ್ರಯದಲ್ಲಿ 11ನೇ ವರ್ಷದ ಮಲೆನಾಡಿಗರ ಕ್ರೀಡಾಕೂಟ-2020 ಜಾಲಹಳ್ಳಿಯ ಎಚ್ಎಂಟಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು.

ಕ್ರೀಡಾಕೂಟದಲ್ಲಿ ಓಟ, ಪಿಕ್ ದಿ ಟ್ರೀ, ಬಾಲ್ ರೇಸ್, ಪಿರಮಿಡ್ ರೇಸ್, ಹೂಪ್ಸ್ ರೋಲಿಂಗ್, ಥ್ರೋಬಾಲ್, ಗೋಣಿಚೀಲದ ಓಟ, ಗುಂಡೆಸೆತ, ಮ್ಯೂಸಿಕಲ್ ಚೇರ್, ವೇಗದ ನಡಿಗೆ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು.

ಕಡುಬು ತಿನ್ನುವ ಸ್ಪರ್ಧೆಯಲ್ಲಿ ಮೂರು ನಿಮಿಷದಲ್ಲಿ 15 ಕಡುಬು ತಿಂದ ಇಬ್ಬರನ್ನು ಅಭಿನಂದಿಸಲಾಯಿತು.

‘ಮಲೆನಾಡಿನಲ್ಲಿ ಪ್ರತಿದಿನ ಕಡುಬು ಮಾಡುತ್ತಾರೆ. ಈ ಹಿಂದೆ ನಿಧಾನವಾಗಿ 21 ಕಡುಬು ತಿಂದಿದ್ದೇನೆ. ಆದರೆ, ಇಲ್ಲಿ ಜನರೆದುರು ಮೂರು ನಿಮಿಷಗಳಲ್ಲೇ 15 ಕಡುಬು ತಿಂದೆ’ ಎಂದು ಸಂತೋಷ್‌ ಕುಮಾರ್ ಹಂಡಿಗೆ ಹೇಳಿದರು.

ಸಂಸ್ಥೆಯ ಅಧ್ಯಕ್ಷ ವಾಸಪ್ಪ ಪಡುಬೈಲ್, ಉಪಾಧ್ಯಕ್ಷ ಸಂದೇಶ್ ಹಂದಿಗೋಡು, ಸಹಕಾರ್ಯದರ್ಶಿ ಸುಕೇಶ್ ದಾಸನಕೊಡಿಗೆ, ಕಾರ್ಯದರ್ಶಿ ಅಂಜೂರ ಕುಡುಮಲ್ಲಿಗೆ, ಖಜಾಂಚಿ ನವೀನ್ ಕಾನೊಳ್ಳಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು