ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಅ.26ರಂದು ’ಕಲ್ಯಾಣವೃಷ್ಟಿಸ್ತವ ಅಭಿಯಾನ’

Published : 24 ಸೆಪ್ಟೆಂಬರ್ 2024, 15:37 IST
Last Updated : 24 ಸೆಪ್ಟೆಂಬರ್ 2024, 15:37 IST
ಫಾಲೋ ಮಾಡಿ
Comments

ಬೆಂಗಳೂರು: ಶೃಂಗೇರಿಯ ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಅವರು ಸನ್ಯಾಸ ಸ್ವೀಕರಿಸಿದ 50ನೇ ವರ್ಷದ ಸಂದರ್ಭದಲ್ಲಿ ಸುವರ್ಣ ಭಾರತೀ ಹೆಸರಿನಲ್ಲಿ ವೇದಾಂತ ಭಾರತೀ ಹಾಗೂ ಶಾಂಕರ ತತ್ತ್ವಪ್ರಸಾರ ಅಭಿಯಾನದಡಿ ರಾಜ್ಯದಾದ್ಯಂತ ‘ಕಲ್ಯಾಣವೃಷ್ಟಿ’ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವೇದಾಂತ ಭಾರತೀ ಸಂಸ್ಥೆಯ ನಿರ್ದೇಶಕ  ಶ್ರೀಧರ ಹೆಗಡೆ ತಿಳಿಸಿದ್ದಾರೆ.

ಅಭಿಯಾನದಲ್ಲಿ ಶಂಕರಭಗವತ್ಪಾದರು ರಚಿಸಿದ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾಸ್ತೋತ್ರ ಹಾಗೂ ಲಕ್ಷ್ಮೀನರಸಿಂಹ ಕರುಣಾರಸ ಸ್ತೋತ್ರ ಎಂಬ ಮೂರು ಸ್ತೋತ್ರಗಳನ್ನು ಉಚಿತವಾಗಿ ಹೇಳಿಕೊಡಲಾಗುವುದು. ಈಗಾಗಲೇ ಬೆಂಗಳೂರಿನ ಸಹಸ್ರಾರು ಪಾರಾಯಣ ಕೇಂದ್ರಗಳು ಹಾಗೂ ವಿದ್ಯಾಸಂಸ್ಥೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚಿನ ಜನರಿಗೆ ಈ ಸ್ತೋತ್ರಗಳನ್ನು ಅಭ್ಯಾಸ ಮಾಡಿಸಲಾಗಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಲ್ಯಾಣವೃಷ್ಟಿಸ್ತವ ಮಹಾಭಿಯಾನ ಶೃಂಗೇರಿ ಜಗದ್ಗುರುಗಳ ನೇತೃತ್ವದಲ್ಲಿ ನಡೆಯಲಿದೆ. ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಶಂಕರಭಾರತೀ ಮಹಾಸ್ವಾಮೀಜಿ, ಬ್ರಹ್ಮಾನಂದ ಭಾರತೀ ಸ್ವಾಮೀಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT