ಬೆಂಗಳೂರು: ಕಾಳಿದಾಸ ಹೆಲ್ತ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಕನಕ ವೈದ್ಯ ವಿಭೂಷಣ ಪ್ರಶಸ್ತಿ’ಗೆ ಮಹಾರಾಷ್ಟ್ರದ ರಾಜ್ಯಸಭೆ ಸದಸ್ಯ ಡಾ. ವಿಕಾಸ್ ಮಹಾತ್ಮೆ ಆಯ್ಕೆಯಾಗಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಸಂಸ್ಥಾಪಕ ಟ್ರಸ್ಟಿ ಡಾ. ವಿಜಯಲಕ್ಷ್ಮಿ ಪರಮೇಶ್, ‘ಕನಕ ವೈದ್ಯ ರತ್ನ ಪ್ರಶಸ್ತಿ’ಗೆ ತುಮಕೂರಿನ ಶ್ರೀದೇವಿ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ. ಹುಲಿನಾಯ್ಕ್, ‘ಕನಕ ವೈದ್ಯಶ್ರೀ ಪ್ರಶಸ್ತಿ’ಗೆ ನಾಗಪುರದ ಹೃದಯ ತಜ್ಞ ಡಾ. ಸತೀಶ ಖಡ್ಸೆ ಹಾಗೂ ಮಧುಮೇಹ ತಜ್ಞ ಡಾ. ವಿಕ್ರಮ್ ಆರೇಳ್ಳ,‘ಕನಕ ವೈದ್ಯ ಗುರು ಪ್ರಶಸ್ತಿ’ಗೆ ಮೈಸೂರಿನ ರೋಗವಿಜ್ಞಾನದ ಪ್ರಾಧ್ಯಾಪಕ ಡಾ. ರಂಗಸ್ವಾಮಿ ಹಾಗೂ ‘ಅಹಿಲ್ಯಾ ವೈದ್ಯ ರತ್ನ ಪ್ರಶಸ್ತಿ’ಗೆ ಅನಂತಪುರದ ಸಹ ಪ್ರಾಧ್ಯಾಪಕಿ ಡಾ.ಸಿ. ಭವಾನಿ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು.

‘ಇದೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾಚರಕನಹಳ್ಳಿಯ ಎಚ್ಬಿಆರ್ ಬಡಾವಣೆಯ ಶ್ರೀಸಾಯಿ ಕಲಾ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗುವುದು. ಇದೇ ವೇಳೆ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಸೀಟು ಪಡೆದ 160 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.