ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಹೊಸ ಕನ್ನಡ ಶಾಲೆ ಉದಯ

Last Updated 7 ಏಪ್ರಿಲ್ 2021, 22:01 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಹೊಸ ಕನ್ನಡ ಶಾಲೆಯೊಂದು ಉದಯವಾಗಿದೆ. ಡಾ. ನಾಗರಾಜ್ ನಾಗತಿಹಳ್ಳಿ ಎಂಬುವರ ನೇತೃತ್ವದಲ್ಲಿ ‘ನಂದಿ ಕನ್ನಡ ಶಾಲೆ’ ನಿರ್ಮಿಸಲಾಗಿದೆ.

ಮಾ.14ರಂದು ಈ ಶಾಲೆ ಆರಂಭವಾಗಿದೆ. ಕನ್ನಡ ಅಕಾಡೆಮಿ ಸಹಯೋಗದಲ್ಲಿ ನಂದಿ ಕನ್ನಡ ಕೂಟದ ಜೊತೆಗೂಡಿ ಆರಂಭಿಸಲಾಗಿರುವ ಈ ಶಾಲೆಯನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಆನ್‌ಲೈನ್‌ನಲ್ಲಿ ಉದ್ಘಾಟಿಸಿದರು. ನಾಗರಾಜ್ ಅವರ ಕನ್ನಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಮೆರಿಕನ್ನಡದ ಮಕ್ಕಳ ಜೀವನಶೈಲಿಯನ್ನು ಗಮನದಲ್ಲಿ ಇಟ್ಟುಕೊಂಡು ಕನ್ನಡ ಪಠ್ಯಪುಸ್ತಕವನ್ನು ರಚಿಸಲಾಗಿದೆ. ಶಿಕ್ಷಣದಜೊತೆಗೆ, ಸರಳವಾದಕನ್ನಡವನ್ನುಬಳಸಿಪರಿಪೂರ್ಣವಾದಎಂಟುಪುಸ್ತಕಗಳನ್ನೊಳಗೊಂಡ, ಪಠ್ಯಕ್ರಮವನ್ನು13 ವರ್ಷಗಳಅವಧಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ’ ಎಂದು ನಾಗರಾಜ್ ಹೇಳಿದರು.

‘ಈಪಠ್ಯಕ್ರಮವು ಮೈಸೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದ್ದು, ವಿದೇಶದಲ್ಲಿ ಕನ್ನಡ ಶಿಕ್ಷಣಕ್ಕೆ ಅರ್ಹವಾಗಿದೆ.ಈಗ ಈ ಪುಸ್ತಕಗಳನ್ನು ಪ್ರಪಂಚದಾದ್ಯಂತದ ಕನ್ನಡ ಕಲಿಸಲು ಶಾಲೆಗಳಲ್ಲಿ ಬಳಸಲಾಗುತ್ತಿದೆ. ಈ ಕನ್ನಡ ಅಕಾಡೆಮಿ ಲಾಭರಹಿತ ಸಂಸ್ಥೆಯಾಗಿದೆ’ ಎಂದು ತಿಳಿಸಿದರು.

ಶಾಲೆಯಲ್ಲಿ 6 ಶಿಕ್ಷಕರು, ಮೂವರು ನಿರ್ವಾಹಕರು ಕೆಲಸ ಮಾಡುತ್ತಿದ್ದು, 42 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಸಂಗೀತಗಾರರಾದ ಸುನೀತಾ ಅನಂತಸ್ವಾಮಿ ‘ಕನ್ನಡವೆಂದರೆ ಬರಿ ನುಡಿಯಲ್ಲ...’ ಹಾಡನ್ನ ಹೇಳುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನಗೆ ಭಾಷಣಕಾರ ಪ್ರೊ. ಕೃಷ್ಣೇಗೌಡ ಭಾಗವಹಿಸಿದ್ದರು. ನಂದಿ ಕನ್ನಡ ಕೂಟದ ಅಧ್ಯಕ್ಷರಾದ ಮೈಥಿಲಿ ಮೂರ್ತಿ, ಡಾ. ಹಲ್ಲಗೆರೆ ಮೂರ್ತಿ, ರಮಾ ಸುರೇಶ್, ಮತ್ತು ಪ್ರೊ. ಮಹಾದೇವ್ ಭಟ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT