ಭಾನುವಾರ, ಆಗಸ್ಟ್ 18, 2019
26 °C

ನೆರೆ ಪರಿಹಾರಕ್ಕೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಿನದ ವೇತನ

Published:
Updated:
Prajavani

ಬೆಂಗಳೂರು: ಕರ್ನಾಟಕ ವಾಣಿಜ್ಯ ತೆರಿಗೆ ಅಧಿಕಾರಿಗಳ ಸಂಘ ತನ್ನ ಅಧಿಕಾರಿಗಳ ಒಂದು ದಿನದ ವೇತನವನ್ನು ರಾಜ್ಯದ ನೆರೆ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದೆ.

ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಆಗಸ್ಟ್‌ ತಿಂಗಳ ಸಂಬಳದಲ್ಲಿ ಒಂದು ದಿನದ ವೇತನವನ್ನು ಕಡಿತಗೊಳಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುವಂತೆ ಮನವಿ ಮಾಡಿದೆ.

ಸಂತ್ರಸ್ತರಿಗೆ ಬೇಕಾದ ಆಹಾರ, ಬಟ್ಟೆ, ನೀರು ಸೇರಿ ಇತರ ಸಾಮಗ್ರಿಗಳನ್ನು ಆರು ಲಾರಿಗಳಲ್ಲಿ ಮಂಗಳವಾರ ಸಂಘದಿಂದ ಕಳುಹಿಸಲಾಯಿತು.

Post Comments (+)