ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫಿ, ಇಂಟೆಲ್‌ಗೆ 'ಕರ್ನಾಟಕ ಐಟಿ ರತ್ನ' ಪ್ರಶಸ್ತಿ ಪ್ರದಾನ

Last Updated 17 ನವೆಂಬರ್ 2022, 20:25 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ವಲಯದಲ್ಲಿ ವಾರ್ಷಿಕ ₹10 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ರಫ್ತು ವಹಿವಾಟು ನಡೆಸುತ್ತಿರುವ ಇನ್ಫೊಸಿಸ್‌ ಮತ್ತು ಇಂಟೆಲ್‌ ಕಂಪನಿಗಳಿಗೆ ಭಾರತೀಯ ಸಾಫ್ಟ್‌ವೇರ್‌ ಪಾರ್ಕ್‌ಗಳ ಒಕ್ಕೂಟದ ಪ್ರತಿಷ್ಠಿತ 'ಕರ್ನಾಟಕ ಐಟಿ ರತ್ನ' ಪ್ರಶಸ್ತಿಯನ್ನು ‘ಬೆಂಗಳೂರು ಟೆಕ್‌ ಸಮ್ಮಿಟ್‌’ನಲ್ಲಿ ಗುರುವಾರ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ವಾರ್ಷಿಕ ಕನಿಷ್ಠ ₹2 ಸಾವಿರ ಕೋಟಿಗಳಿಂದ ಗರಿಷ್ಠ ₹10 ಸಾವಿರ ಕೋಟಿವರೆಗೆ ರಫ್ತು ವಹಿವಾಟು ನಡೆಸಿರುವ ಟಿಸಿಎಸ್‌, ಬಾಷ್‌, ಮೈಂಡ್‌ಟ್ರೀ ಸೇರಿ 21 ಕಂಪನಿಗಳಿಗೆ 'ಐಟಿ ಪ್ರೈಡ್‌ ಆಫ್‌ ಕರ್ನಾಟಕ' ಪ್ರಶಸ್ತಿಯನ್ನು ನೀಡಿ, ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 'ರಾಜ್ಯದಿಂದ ಈಗ ವರ್ಷಕ್ಕೆ ಐಟಿ ವಲಯವು ₹6 ಲಕ್ಷ ಕೋಟಿ ಮೊತ್ತದ ರಫ್ತು ವಹಿವಾಟು ನಡೆಸುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಇದನ್ನು ಇನ್ನೂ ಹೆಚ್ಚಿಸಬೇಕು' ಎಂದರು.

ಎಸ್‌ಟಿಪಿಐನ ಅರವಿಂದಕುಮಾರ್ ಮತ್ತು ಶೈಲೇಂದ್ರ ತ್ಯಾಗಿ, ಐಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್‌ ಇದ್ದರು.

‘ಐಟಿ ಪ್ರೈಡ್‌ ಆಫ್‌ ಕರ್ನಾಟಕ’
ಆಕ್ಸೆಂಚರ್‌, ಅಮೆಜಾನ್‌ ಡೆವಲಪ್‌ಮೆಂಟ್‌ ಸೆಂಟರ್‌, ಡೆಲ್‌, ಇಐಟಿ ಸರ್ವೀಸಸ್‌, ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌, ಎಚ್‌ಎಸ್‌ಬಿಸಿ, ಐಬಿಎಂ, ಜೆ.ಪಿ.ಮಾರ್ಗನ್‌, ಜೂನಿಪರ್‌ ನೆಟ್‌ವರ್ಕ್ಸ್‌, ಮರ್ಸಿಡಿಸ್‌ ಬೆಂಜ್‌, ಮೈಕ್ರೋಸಾಫ್ಟ್‌, ಕ್ವಾಲ್‌ಕಾಂ, ಸ್ಯಾಮ್ಸಂಗ್‌, ಎಸ್‌ಎಪಿ ಲ್ಯಾಬ್ಸ್‌, ಸ್ಟ್ಯಾಂಡರ್ಡ್ ಚಾರ್ಟರ್ಡ್‌, ವಿಎಂವೇರ್‌ ಮತ್ತು ವಿಪ್ರೊ.

ಇತರೆ ಪ್ರಶಸ್ತಿ ಪುರಸ್ಕೃತ ಕಂಪನಿಗಳು
* ವಿಜಯಾ ಪೈ, ಇನ್ವೆಂಜರ್‌ ಟೆಕ್ನಾಲಜೀಸ್‌, ಮಂಗಳೂರು (ವರ್ಷದ ಮಹಿಳಾ ಉದ್ಯಮಿ)
* ಇನ್ಫೋಸಿಸ್‌ ಬಿಪಿಎಂ (ಮಹಿಳಾ ಸಬಲೀಕರಣ)
* ಎಕ್ಯೂಆರ್‌ ಕ್ಯಾಪಿಟಲ್‌ (ಉದ್ಯೋಗಿವಾರು ಅತ್ಯಧಿಕ ರಫ್ತು)
* ಟಿಎಲ್‌ಜಿ ಇಂಡಿಯಾ (ಐಟಿ ಬೆಂಬಲಿತ ಸೇವೆಗಳ ವಲಯದಲ್ಲಿ ಅತ್ಯಧಿಕ ಉದ್ಯೋಗ ಸೃಷ್ಟಿ
* ಫಿಡೆಲಿಟಿ ಇಂಡಿಯಾ (ಐಟಿ ವಲಯದಲ್ಲಿ ಅತ್ಯಧಿಕ ಉದ್ಯೋಗಸೃಷ್ಟಿ ಮತ್ತು ಮಹಿಳಾ ಸಬಲೀಕರಣ)
* ಎಕ್ಸೆಲ್‌ಸಾಫ್ಟ್‌ (ಮೈಸೂರು ವಲಯದಲ್ಲಿ ಅತ್ಯುತ್ತಮ ಸಾಧನೆ, ಐಟಿ/ಐಟಿಇಎಸ್‌
* ದಿಯಾ ಸಿಸ್ಟಮ್ಸ್‌ (ಮಂಗಳೂರು ವಲಯದಲ್ಲಿ ಅತ್ಯುತ್ತಮ ಸಾಧನೆ, ಐಟಿ/ಐಟಿಇಎಸ್‌
* ಸಂಕಲ್ಪ್‌ ಸೆಮಿಕಂಡಕ್ಟರ್‌ (ಹುಬ್ಬಳ್ಳಿ ವಲಯದಲ್ಲಿ ಅತ್ಯುತ್ತಮ ಸಾಧನೆ, ಐಟಿ/ಐಟಿಇಎಸ್‌)
* ಕೇನೆಸ್‌ ಟೆಕ್ನಾಲಜಿ (ಮೈಸೂರು, ಎಲೆಕ್ಟ್ರಾನಿಕ್‌ ಹಾರ್ಡ್‌ವೇರ್‍‌ ರಫ್ತು
* ವಿಪ್ರೊಜಿಇ ಹೆಲ್ತ್‌ಕೇರ್‌ (ಬೆಂಗಳೂರು, ಎಲೆಕ್ಟ್ರಾನಿಕ್‌ ಹಾರ್ಡ್‌ವೇರ್‌ ರಫ್ತು)
* ಎಂಫಸಿಸ್‌ (₹1,000 ಕೋಟಿಗಳಿಂದ ₹2,000 ಕೋಟಿವರೆಗಿನ ರಫ್ತು ವಹಿವಾಟಿನಲ್ಲಿ ಅತ್ಯುತ್ತಮ ಬೆಳವಣಿಗೆ
* ಕೋಫೋರ್ಜ್‌ ಲಿಮಿಟೆಡ್‌ (₹100 ಕೋಟಿಗಳಿಂದ ₹1,000 ಕೋಟಿವರೆಗಿನ ರಫ್ತು ವಹಿವಾಟಿನಲ್ಲಿ ಅತ್ಯುತ್ತಮ ಬೆಳವಣಿಗೆ
* ಇನ್ವೆಂಜರ್‌ (₹5 ಕೋಟಿಗಳಿಂದ ಗರಿಷ್ಠ 100ಕೋಟಿಗಳವರೆಗಿನ ರಫ್ತಿನಲ್ಲಿ ಅತ್ಯುತ್ತಮ ಬೆಳವಣಿಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT