ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಪೇಗೌಡರ ಆದರ್ಶ, ತತ್ವ ಉಳಿಸಿ ಬೆಳೆಸಬೇಕು: ಬಿಜೆಪಿ ಮುಖಂಡ ಎನ್.ಸಿ. ಕುಮಾರ್

Published 27 ಜೂನ್ 2024, 15:29 IST
Last Updated 27 ಜೂನ್ 2024, 15:29 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ‘ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆದರ್ಶ ತತ್ವ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ಎಲ್ಲಾ ವರ್ಗ, ಧರ್ಮದವರು ಮಾಡಬೇಕಾಗಿದೆ’ ಎಂದು ಬಿಜೆಪಿ ಮುಖಂಡ ಎನ್.ಸಿ. ಕುಮಾರ್ ತಿಳಿಸಿದರು.

ನಾಗದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೆಂಪೇಗೌಡರು, ಎಲ್ಲ ವರ್ಗದ. ಧರ್ಮದವರು ವ್ಯಾಪಾರ ವಹಿವಾಟು ನಡೆಸಲು ಬೆಂಗಳೂರಿನಲ್ಲಿ ಪೇಟೆಗಳನ್ನು ನಿರ್ಮಿಸಿದರು.  ನೆಮ್ಮದಿ, ಸಹಬಾಳ್ವೆಯ ಮಹತ್ವ ಸಾರಿದವರು. ಪ್ರಕೃತಿ, ಸಂಸ್ಕೃತಿ, ಭಾಷೆಯ ರಕ್ಷಕರಾಗಿ, ನಾಡಿನ ಅಭಿವೃದ್ಧಿಗಾಗಿ ದುಡಿದವರು’ ಎಂದು ಸ್ಮರಿಸಿದರು.

ಕೆಂಪೇಗೌಡ ಯುವಶಕ್ತಿ ವೇದಿಕೆ ಅಧ್ಯಕ್ಷ ಬಿ.ಆರ್. ಮಹೇಶ್, ಜಯ ಕರ್ನಾಟಕ ಯಶವಂತಪುರ ಕ್ಷೇತ್ರದ ಅಧ್ಯಕ್ಷ ವಿಜಯ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಕುಮಾರಸ್ವಾಮಿ, ಚಂದ್ರಶೇಖರ್, ವೆಂಕಟೇಶಪ್ಪ, ಚಂದ್ರಕಲಾ, ಜಿ.ಎಂ.ಅನಿತಾ, ಜ್ಯೋತಿ ಗೌಡ, ನಾಗಲಕ್ಷ್ಮಿ, ಈರಣ್ಣ, ಆಟೊ ಪುಟ್ಟೇಗೌಡ, ಕನಕಪುರ ಗೋವಿಂದಪ್ಪ, ಶ್ರೀನಿವಾಸಗೌಡ, ಬೋರೇಗೌಡ, ರಕ್ಷಿತ್ ಇದ್ದರು.

’ಹಸಿರು ಬೆಂಗಳೂರು ಉಳಿಸಬೇಕಿದೆ’

'ನಾಡಪ್ರಭು ಕೆಂಪೇಗೌಡರು 500 ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಕೆರೆ, ಕುಂಟೆ, ವಿವಿಧ ಪೇಟೆಗಳನ್ನು ನಿರ್ಮಿಸಿ ಸರ್ವಜನಾಂಗದ ಅಭಿವೃದ್ದಿ, ಏಳಿಗೆಗಾಗಿ ಶ್ರಮಿಸಿದ್ದರು’ ಎಂದು ಕಾಂಗ್ರೆಸ್ ಮುಖಂಡ ಬಿ.ಆರ್. ಶಿವಮಾದಯ್ಯ ಸ್ಮರಿಸಿದರು.

ಪಟ್ಟಣಗೆರೆ ಸಮೀಪದ ಕೃಷ್ಣ ಗಾರ್ಡನ್‌ನಲ್ಲಿ ಕೆಂಪೇಗೌಡ ಸಂಘ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಕೆಂಪೇಗೌಡರ ಅವಧಿಯಲ್ಲಿದ್ದ ಹಸಿರು ನಗರ, ಕೆರೆ, ಕುಂಟೆಗಳನ್ನು ಉಳಿಸಬೇಕಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೃತ್ ಗೌಡ, ಕೆಂಪೇಗೌಡ ಸಂಘದ ಅಧ್ಯಕ್ಷ ಲಿಂಗೇಗೌಡ, ಖಜಾಂಚಿ ಅರುಣ್ ಕುಮಾರ್, ಎ.ಟಿ. ವೆಂಕಟೇಶ್, ಮಾರುತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT