ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಮಂದಿ ಅಪಹರಣಕಾರರ ಬಂಧನ

₹ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ತಂಡ, ಆಂಧ್ರಪ್ರದೇಶದ ಕರ್ನೂಲ್‌ ಬಳಿ ವ್ಯಕ್ತಿಯ ರಕ್ಷಣೆ
Last Updated 29 ಜೂನ್ 2022, 16:04 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿಯನ್ನು ಅಪಹರಿಸಿ ಆಂಧ್ರಪ್ರದೇಶದ ಕರ್ನೂಲ್‌ಗೆ ಕರೆದೊಯ್ದಿದ್ದ ತಂಡವನ್ನು ಸಿನಿಮೀಯ ಶೈಲಿಯಲ್ಲಿ ಪೊಲೀಸರು ಬಂಧಿಸಿ, ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಇಲ್ಲಿನ ಬಸವಣ್ಣನಗರದ ಸುಂದರಪ್ಪ ಲೇಔಟ್‌ನ ಚಂದ್ರಮ್ಮ ಜೂನ್‌ 26ರಂದು ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪತಿಯ ಅಪಹರಣದ ಕುರಿತು ದೂರು ನೀಡಿದ್ದರು.

‘ತಂಡವು ₹ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದು, ಕರ್ನೂಲ್‌ಗೆ ತಂದುಕೊಡುವಂತೆ ಬೆದರಿಕೆ ಒಡ್ಡಿದೆ’ ಎಂದು ದೂರಿನಲ್ಲಿ ತಿಳಿಸಿದ್ದರು.

ಕಾರ್ಯಾಚರಣೆಗೆ ತಂಡ ರಚಿಸಿದ್ದ ಪೊಲೀಸರು ಕರ್ನೂಲ್‌ನಿಂದ 50 ಕಿ.ಮೀ. ದೂರದ ಎರಕಲಚೆರವು ಎಂಬಲ್ಲಿ ಸಿದ್ದಪ್ಪ ಅವರನ್ನು ರಕ್ಷಿಸಿ ನಗರಕ್ಕೆ ಕರೆತಂದಿದ್ದಾರೆ.

ಇಂದ್ರಾವತ್‌ದೇವ್‌ (36), ದಡ್ಡುಕಟ್ಟಿ ಮಲ್ಲಿಕಾರ್ಜುನ್‌ (32), ಮದನ್‌ಕುಮಾರ್‌ (29), ಸುಂಕಣ್ಣ (40), ಪ್ರಶಾಂತ್‌ (24), ಚಂದ್ರಶೇಖರ್‌ (29) ಎಂಬ ಅಪಹರಣಕಾರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈಟ್‌ಫೀಲ್ಡ್‌ ಉಪ ವಿಭಾಗದ ಎ.ಸಿ.ಪಿ ಶಾಂತಮಲ್ಲಪ್ಪ ಮಾರ್ಗದರ್ಶನದಲ್ಲಿ ಮಹದೇವಪುರ ಠಾಣೆಯ ಇನ್‌ಸ್ಪೆಕ್ಟರ್ ಪ್ರಶಾಂತ್‌ ಆರ್. ವರ್ಣಿ, ಪಿಎಸ್‌ಐ ವಿನೋದ್‌ಕುಮಾರ್‌, ಆನಂದ ಮಾನಶೆಟ್ಟರ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು. ಕಾರ್ಯಾಚರಣೆ ತಂಡವನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT