ಮೆಜಿಸ್ಟಿಕ್‌ ಹಳೆ ಪ್ಲಾಟ್‌ಫಾರ್ಮ್‌ಗಳು ಇಂದಿನಿಂದ ಮತ್ತೆ ಬಳಕೆಗೆ

7

ಮೆಜಿಸ್ಟಿಕ್‌ ಹಳೆ ಪ್ಲಾಟ್‌ಫಾರ್ಮ್‌ಗಳು ಇಂದಿನಿಂದ ಮತ್ತೆ ಬಳಕೆಗೆ

Published:
Updated:
Deccan Herald

ಬೆಂಗಳೂರು: ಎಂಟು ವರ್ಷಗಳಿಂದ ಬಂದ್‌ ಆಗಿದ್ದ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಕೇಂದ್ರ ನಿಲ್ದಾಣದ ಹಳೆಯ ಪ್ಲಾಟ್‌ಫಾರ್ಮ್‌ಗಳು ಶುಕ್ರವಾರದಿಂದ ಮತ್ತೆ ಬಳಕೆಗೆ ಲಭ್ಯವಾಗಿವೆ.

ಮೆಜೆಸ್ಟಿಕ್‌ನ ಮೆಟ್ರೊ ನಿಲ್ದಾಣದ ಕಾಮಗಾರಿಗಾಗಿ ಬಸ್‌ ನಿಲ್ದಾಣದ ಜಾಗವನ್ನು ಬಿಟ್ಟುಕೊಡಲಾಗಿತ್ತು. ಕಾಮಗಾರಿ ಮುಗಿದಿದ್ದು, ಮೆಟ್ರೊ ರೈಲು ನಿಗಮ ನಿಲ್ದಾಣದ ಜಾಗವನ್ನು ಕೆಎಸ್‌ಆರ್‌ಟಿಸಿಗೆ ವರ್ಗಾಯಿಸಿದೆ.

ಸಾರಿಗೆ ನಿಮಗವೇ ಬಸ್‌ ನಿಲ್ದಾಣವನ್ನು ನವೀಕರಿಸಿದೆ. ಬಸ್‌ಗಳು ನಿಲ್ಲುವ ಪ್ರದೇಶವನ್ನು ಕಾಂಕ್ರೀಟ್‌ ಫ್ಲೋರಿಂಗ್‌ ಮಾಡಲಾಗಿದೆ. ಪ್ರಯಾಣಿಕರು ಕಾಯುವ ಪ್ರದೇಶದಲ್ಲಿ ಮಾರ್ಬಲ್‌ಗಳನ್ನು ಹಾಸಲಾಗಿದೆ. ಹೊಸ ಛಾವಣಿ ಹಾಕಲಾಗಿದೆ. ಬೆಂಚ್‌ಗಳ ವ್ಯವಸ್ಥೆ ಮಾಡಲಾಗಿದೆ. ಕುಡಿಯವ ನೀರು ಮತ್ತು ಶೌಚಾಲಯ ಸೌಲಭ್ಯ ಸುಧಾರಿಸಲಾಗಿದೆ. ಶಿಶುಗಳ ಪೋಷಣ ಕೊಠಡಿ ರೂಪಿಸಲಾಗಿದೆ. 

ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲಾ ಕೇಂದ್ರಗಳಿಗೆ ಬಸ್‌ಗಳು ಈ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಿಂದ ಹೊರಡಲಿವೆ.

ನಿಲ್ದಾಣದ ಜಾಗ ಮತ್ತೆ ಸಿಕ್ಕಿರುವುದರಿಂದ ಹಬ್ಬಗಳ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ಗಳನ್ನು ಹೊರಡಿಸಲು ಅನುಕೂಲ ಆಗಲಿದೆ. ಇಲ್ಲಿ ವಾಣಿಜ್ಯ ಮಳಿಗೆಗಳು ಇರುವುದರಿಂದ ನಿಗಮಕ್ಕೆ ವರಮಾನ ಬರುವ ನಿರೀಕ್ಷೆಯೂ ಇದೆ.

ಕಾಮಗಾರಿಯ ಕಾರಣಕ್ಕಾಗಿ ತಮಿಳುನಾಡು ಮತ್ತು ಮೈಸೂರು ಕಡೆಗೆ ಹೊರಡುವ ಬಸ್‌ಗಳನ್ನು ಶಾಂತಿನಗರ ಮತ್ತು ಸ್ಯಾಟ್‌ಲೈಟ್‌ ನಿಲ್ದಾಣಗಳಿಗೆ ಸ್ಥಳಾಂತರಿಸಲಾಗಿತ್ತು.

‘ನವೀಕೃತ ಕೇಂದ್ರ ಬಸ್‌ ನಿಲ್ದಾಣ ಕಾರ್ಯಾರಂಭ ಮಾಡಿದರೂ ಶಾಂತಿನಗರದಿಂದ ತಮಿಳುನಾಡಿನ ಕಡೆಗೆ ಮತ್ತು ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ನಿಲ್ದಾಣದಿಂದ ಮೈಸೂರು ಕಡೆಗೆ ಬಸ್‌ಗಳು ಎಂದಿನಂತೆ ಸಂಚರಿಸಲಿವೆ’ ಎಂದು ನಿಗಮದ ವಿಭಾಗೀಯ ನಿಯಂತ್ರಣ ಅಧಿಕಾರಿ ಇನಾಯತ್‌ ಬಾಗ್‌ಬಾನ್ ತಿಳಿಸಿದರು. ನವೀಕರಣದ ವೆಚ್ಚವನ್ನು ಮಾತ್ರ ಅವರು ತಿಳಿಸಲಿಲ್ಲ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !