ಶನಿವಾರ, ಜೂನ್ 12, 2021
24 °C

ವಾಹನ ಬಳಕೆ ನಿರ್ಬಂಧ: ಪೊಲೀಸರ ದಬ್ಬಾಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಲಾಕ್‌ಡೌನ್ ನೆಪದಲ್ಲಿ ನಾಗರಿಕರ ವಾಹನ ಬಳಕೆಗೆ ಪೊಲೀಸರು ನಿರ್ಬಂಧಿಸುತ್ತಿದ್ದು, ನಾಗರಿಕರ ಮೇಲೆ ಪೊಲೀಸರು ನಡೆಸುತ್ತಿರುವ ದಬ್ಬಾಳಿಕೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಆರೋಪಿಸಿದ್ದಾರೆ.

ವಾಹನ ಬಳಸದೆ ನಡೆದುಕೊಂಡೇ ಅಗತ್ಯ ವಸ್ತುಗಳ ಖರೀದಿಗೆ ಹೋಗುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಕೃಷಿ ಚಟುವಟಿಕೆ ಅವಕಾಶ ಇದ್ದರೂ, ಜಮೀನಿಗೆ ತೆರಳಲು ರೈತರು ಪರದಾಡಬೇಕಾಗಿದೆ. ಕೃಷಿ ಇಲಾಖೆಯಿಂದ ಪಾಸ್ ಪಡೆದುಕೊಂಡಿದ್ದರೂ ವಾಹನದಲ್ಲಿ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.

‘ನಾನೂ ಕೃಷಿಕನಾಗಿದ್ದು, 60 ಕಿಲೋ ಮೀಟರ್ ದೂರದಲ್ಲಿರುವ ಜಮೀನಿಗೆ ತೆರಳಲು ಅವಕಾಶ ನೀಡುತ್ತಿಲ್ಲ. ಪಾಸ್ ಇದ್ದರೂ ವಾಹನ ಜಪ್ತಿ ಮಾಡುವ ಬೆದರಿಕೆಯನ್ನು ಪೊಲೀಸರು ಹಾಕುತ್ತಿದ್ದಾರೆ. ವಾಹನ ಬಳಕೆಗೆ ಅವಕಾಶ ನೀಡಿ ಸರ್ಕಾರ ಕೂಡಲೇ ಸುತ್ತೋಲೆ ಹೊರಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು