ಬೆಂಗಳೂರು: ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ ಮತ್ತು ಅಮೀರ್ಖಾನ್ ಹೆಸರಲ್ಲಿ ಮಹಾರಾಷ್ಟ್ರದಲ್ಲಿ ನೋಂದಣಿ ಆಗಿರುವ ಐಷಾರಾಮಿ ಕಾರುಗಳು ರಾಜ್ಯದಲ್ಲಿ ಸಂಚರಿಸುತ್ತಿರುವುದನ್ನು ಪತ್ತೆಹಚ್ಚಿರುವ ಸಾರಿಗೆ ಅಧಿಕಾರಿಗಳು ದಂಡ ಮತ್ತು ತೆರಿಗೆ ಸೇರಿ ₹38.26 ಲಕ್ಷ ವಸೂಲಿ ಮಾಡಿದ್ದಾರೆ.

ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನೋಂದಣಿಯಾಗಿರುವ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಮತ್ತು ಅಮೀರ್ ಖಾನ್ ಹೆಸರಲ್ಲಿ ನೋಂದಣಿಯಾಗಿರುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಬೆಂಗಳೂರು ನಗರದಲ್ಲಿ ಕೆಲವು ವರ್ಷಗಳಿಂದ ಸಂಚರಿಸುತ್ತಿದ್ದವು. ಈ ಕಾರುಗಳು ಉದ್ಯಮಿ ಕೆಜಿಎಫ್ ಬಾಬು ಅವರ ವಸಂತನಗರದ ಮನೆಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದರು. ಅಫ್ನಾನ್ ಕನ್ಸ್ಟ್ರಕ್ಷನ್ ಕಂಪನಿಯು ದಂಡ ಮತ್ತು ತೆರಿಗೆಯ ಮೊತ್ತಕ್ಕೆ ಡಿ.ಡಿಯನ್ನು ನೀಡಿತು.

‘ಸಿನಿಮಾ ನಟರಿಂದ ಕೆಜಿಎಫ್ ಬಾಬು ಕಾರು ಖರೀದಿ ಮಾಡಿದ್ದರು. 15 ದಿನಗಳ ಒಳಗೆ ದಾಖಲೆಗಳನ್ನು ಖರೀದಿದಾರರು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಬೇಕು ಎಂದು ಆಗ ಪತ್ರ ನೀಡಲಾಗಿತ್ತು. ಆದರೆ, ಖರೀದಿ ಮಾಡಿದ ಬಳಿಕ ಕೆಜಿಎಫ್ ಬಾಬು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿರಲಿಲ್ಲ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರುಗಳು ರಾಜ್ಯದಲ್ಲೇ ಓಡಾಡುತ್ತಿರುವ ಬಗ್ಗೆ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಿಂದ (ಟಿಎಂಸಿ) ಮಾಹಿತಿ ಬಂದಿತ್ತು. ಅದರಂತೆ ಕಾರ್ಯಾಚರಣೆ ನಡೆಸಲಾಯಿತು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾರಿಗೆ ಜಂಟಿ ಆಯುಕ್ತರಾದ ಶೋಭಾ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಪ್ರಾದೇಶಿಕ ಸಾರಿಗೆ ಅಧಿಕಾರಿ ದೀಪಕ್, ದಕ್ಷಿಣ ಪ್ರಾದೇಶಿಕ ಅಧಿಕಾರಿ ವಿ.ಪಿ. ರಮೇಶ್, ಸಿಬ್ಬಂದಿ ರಂಜಿತ್ ಎನ್., ರಾಜೇಶ್ ಎಸ್.ಪಿ., ಸುಧಾಕರ್ ಎಂ., ಮಂಜುನಾಥ್ ಎಚ್.ಎಂ., ರಂಜಿತಾ ಬಿ.ಕೆ.ಮ ಅಮೋಘ್ ಪ್ರಭು, ಕೆಂಪರಾಜು ಕಾರ್ಯಾಚರಣೆ ನಡೆಸಿದ್ದರು.

ಅಮಿತಾಬ್ಗೇ ನೋಟಿಸ್

‘ಒಂದು ಕಾರು 2021ರಿಂದ ಮತ್ತು ಇನ್ನೊಂದು ಕಾರು 2023ರಿಂದ ರಾಜ್ಯದಲ್ಲಿ ಓಡಾಡುತ್ತಿದೆ. 2021ರಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಪತ್ತೆ ಹಚ್ಚಲಾಗಿತ್ತು. ಅಮಿತಾಬ್ ಬಚ್ಚನ್ ಅವರಿಗೂ ನೋಟಿಸ್ ನೀಡಲಾಗಿತ್ತು. ತಾತ್ಕಾಲಿಕವಾಗಿ ಕಾರನ್ನು ಬೆಂಗಳೂರಿಗೆ ತರಲಾಗಿದೆ. ಮಹಾರಾಷ್ಟ್ರದಲ್ಲಿಯೇ ಸಂಚರಿಸಲಿದೆ ಎಂದು ಆಗ ಕೆಜಿಎಫ್ ಬಾಬು ತಿಳಿಸಿದ್ದರು. ಆದರೂ ಇಲ್ಲೇ ಓಡಾಡುತ್ತಿದ್ದುದರಿಂದ ದಂಡ ವಿಧಿಸಲಾಗಿದೆ. ಕೂಡಲೇ ಖರೀದಿದಾರರ ಹೆಸರಿಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.