ಭಾನುವಾರ, ಜನವರಿ 26, 2020
18 °C

‘ಛಪಾಕ್’ ಬಹಿಷ್ಕರಿಸಿ ಮಹಾಸಭಾ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿರುವ ‘ಛಪಾಕ್’ ಚಿತ್ರವನ್ನು ಬಹಿಷ್ಕರಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಲ್‌.ಕೆ.ಸುವರ್ಣ, ‘ರಾಜ್ಯದಲ್ಲಿ ಛಪಾಕ್ ಸಿನಿಮಾ ಬಿಡುಗಡೆಗೆ ನಮ್ಮ ಸಂಪೂರ್ಣ ವಿರೋಧವಿದೆ. ಆ್ಯಕ್ಸಿಸ್‌ ಬ್ಯಾಂಕ್‌ನ ಅಭಿಯಾನವೊಂದಕ್ಕೆ ದೀಪಿಕಾ ರಾಯಭಾರಿಯಾಗಿದ್ದು, ಅದಕ್ಕೆ ಸಂಬಂಧಿಸಿ ಪ್ರದರ್ಶಿಸಿರುವ ಜಾಹೀರಾತುಗಳಲ್ಲಿ ದೀಪಿಕಾ ಭಾವಚಿತ್ರ ಇದೆ. ಕೂಡಲೇ ಅವುಗಳನ್ನು ತೆರವು ಮಾಡದಿದ್ದಲ್ಲಿ, ಮಹಾಸಭಾ ವತಿಯಿಂದಲೇ ತೆರವು ಮಾಡಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು