ಮಂಗಳವಾರ, ಅಕ್ಟೋಬರ್ 26, 2021
26 °C

ಮಲಬಾರ್‌ ಗೋಲ್ಡ್‌: ಕಲಾತ್ಮಕ ಆಭರಣಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌’ನ ಕಲಾತ್ಮಕ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ನಟಿ ಆದಿತಿ ಪ್ರಭುದೇವ ಅವರು ಜಯನಗರ ಮತ್ತು ರಾಜಾಜಿನಗರ ಷೋ ರೂಮ್‌ಗಳಲ್ಲಿ ಶನಿವಾರ ಚಾಲನೆ ನೀಡಿದರು.

ಪರಿಣತಿ ಪಡೆದ ಕುಶಲಕರ್ಮಿಗಳಿಂದ ಈ ಆಭರಣಗಳನ್ನು ತಯಾರಿಸಲಾಗಿದೆ. ಪ್ರತಿ ಆಭರಣವು ವಿಶೇಷ ಆಕರ್ಷಣೆ ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.

‘ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌’ನ ವಿವಿಧ ಬ್ರ್ಯಾಂಡೆಡ್‌ ಆಭರಣಗಳು ಇಲ್ಲಿ ಲಭ್ಯ. ಹಬ್ಬದ ನಿಮಿತ್ತ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಪ್ರತಿಯೊಂದು ವಜ್ರದ ಆಭರಣಗಳು ಮತ್ತು ಮುತ್ತು ರತ್ನಗಳ ಖರೀದಿ ಜತೆಗೆ ₹50 ಸಾವಿರ ಮೌಲ್ಯದ ಚಿನ್ನದ ನಾಣ್ಯದ ಕೊಡುಗೆ ನೀಡಲಾಗುವುದು. ಅಕ್ಟೋಬರ್‌ 17ರವರೆಗೆ ಈ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು