ಭಾನುವಾರ, ಆಗಸ್ಟ್ 1, 2021
20 °C

ನಾಲ್ಕೂವರೆ ಕೆ.ಜಿ ಚಿನ್ನ ಸಮೇತ ತಯಾರಕ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಭರಣ ತಯಾರಿಸಿ ಕೊಡುವುದಾಗಿ ಜ್ಯುವೆಲ್ಲರಿ ಮಳಿಗೆ ಮಾಲೀಕನನ್ನು ನಂಬಿಸಿದ ಆಭರಣ ತಯಾರಕ 4.5 ಕೆ.ಜಿ. ಚಿನ್ನ ಸಹಿತ ಪರಾರಿಯಾಗಿದ್ದಾನೆ.

ಆರ್.ಎಂ.ವಿ. ಲೇಔಟ್ ನಿವಾಸಿ ಸುನೀಲ್ ಕುಮಾರ್ ವಂಚನೆಗೊಳಗಾದವರು. ಸುರೇಶ್ ಆಚಾರಿ ಎಂಬಾತನ ವಿರುದ್ಧ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಐದು ವರ್ಷಗಳಿಂದ ಗಾಂಧಿನಗರದ 5ನೇ ಕ್ರಾಸ್‌ನಲ್ಲಿ ಸುನೀಲ್‌ ಜ್ಯುವೆಲರಿ ಮಳಿಗೆ ನಡೆಸುತ್ತಿದ್ದಾರೆ. ಅದೇ ಕಟ್ಟಡದ ಕೊಠಡಿಯೊಂದರಲ್ಲಿ ಆಭರಣ ತಯಾರಿಸುವ ಕೆಲಸ ಮಾಡಿಕೊಂಡಿದ್ದ ಸುರೇಶ್‌, ಸುನೀಲ್‌ಗೆ ಸಂಬಂಧಿಸಿದ ಆಭರಣಗಳನ್ನು ತಯಾರಿಸಿ ಕೊಡುತ್ತಿದ್ದ.

2018ರಲ್ಲಿ ಅಂಗಡಿ ಮುಚ್ಚಿ ಹೋಗಿದ್ದ ಸುರೇಶ್, ಮತ್ತೆ ಬಂದು ಕೆಲಸ ಮಾಡಿಕೊಡುವುದಾಗಿ ಹೇಳಿದ್ದ. ಇದನ್ನು ನಂಬಿ ಸುನೀಲ್‌ 10 ಕೆ.ಜಿ. ಚಿನ್ನದ ಬಿಸ್ಕತ್ತು ನೀಡಿದ್ದರು. ಅದರಲ್ಲಿ 5.5 ಕೆ.ಜಿ. ಚಿನ್ನಾಭರಣ ತಯಾರಿಸಿಕೊಟ್ಟಿದ್ದ ಸುರೇಶ್, ಬಳಿಕ ನಾಪತ್ತೆಯಾಗಿದ್ದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು