ಭಾನುವಾರ, ಜೂನ್ 20, 2021
28 °C
ಗ್ರಾಹಕರಿಗೆ ಹಲವು ಕೊಡುಗೆ–ವಿಶೇಷ ರಿಯಾಯಿತಿ

ಮಲಬಾರ್‌ನಿಂದ ‘ಪ್ರೈಸ್‌ ಪ್ರಾಮಿಸ್’ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಪ್ರಮುಖ ಚಿನ್ನ ಮತ್ತು ವಜ್ರಾಭರಣಗಳ ಕಂಪನಿ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್ಸ್‌ ರಾಜ್ಯದಾದ್ಯಂತ ‘ಮಾನ್ಸೂನ್‌ ಪ್ರೈಸ್‌ ಪ್ರಾಮಿಸ್’ ಅಭಿಯಾನ ಆರಂಭಿಸಿದೆ. ಅಂದರೆ, ತನ್ನ ಗ್ರಾಹಕರಿಗೆ ಹಲವು ಕೊಡುಗೆಗಳನ್ನು, ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ಸೆ. 4ರವರೆಗೆ ಈ ರಿಯಾಯಿತಿಗಳು ಇರಲಿವೆ.

ಚಿನ್ನಾಭರಣಗಳ ಮೇಕಿಂಗ್‌ ಚಾರ್ಜ್‌ನಲ್ಲಿ ಶೇ 20ರಿಂದ ಶೇ 50ರವರೆಗೆ ರಿಯಾಯಿತಿ, ವಜ್ರದ ಮೌಲ್ಯದಲ್ಲಿ ಶೇ 25ರವರೆಗೆ ಡಿಸ್ಕೌಂಟ್ ಇದೆ. ಅಲ್ಲದೆ, 22 ಕ್ಯಾರಟ್‌ನ ಹಳೆಯ ಚಿನ್ನದ ವಿನಿಮಯದ ಮೇಲೆ ಯಾವುದೇ ಕಡಿತ ಇರುವುದಿಲ್ಲ ಎಂದು ಕಂಪನಿ ಹೇಳಿದೆ. 

ಮುಂಗಡವಾಗಿ ಶೇ 10 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ, ಆಭರಣಗಳನ್ನು ಕಾಯ್ದಿರಿಸಬಹುದು. ಚಿನ್ನದ ದರದಲ್ಲಾಗುವ ಏರಿಳಿತದಿಂದ ರಕ್ಷಣೆ ಪಡೆಯಬಹುದಾಗಿದೆಯಲ್ಲದೆ, ಹಳೆಯ ಚಿನ್ನಕ್ಕೆ ಗರಿಷ್ಠ ಮೌಲ್ಯ ಪಡೆಯಬಹುದು. 

ಹಳೆಯ ಚಿನ್ನ ಖರೀದಿ: ಹಳೆಯ ಚಿನ್ನ ಮತ್ತು ವಜ್ರಾಭರಣಗಳನ್ನು ಕಂಪನಿಯು ಖರೀದಿಸಲಿದೆ. ಆಭರಣಗಳನ್ನು ಎಲ್ಲಿಯೇ ಖರೀದಿ ಮಾಡಿದ್ದರೂ ಅವುಗಳನ್ನು ಕಂಪನಿಯು ತೆಗೆದುಕೊಳ್ಳಲಿದೆ. 

ಈ ಕೊಡುಗೆಗಳು ಕಂಪನಿಯ ಎಲ್ಲ ಷೋರೂಂಗಳಲ್ಲಿಯೂ ಲಭ್ಯ ಇವೆ. ಕೆವೈಸಿ ಮಾರ್ಗಸೂಚಿಗಳನ್ವಯ ವ್ಯವಹಾರವನ್ನು ಚೆಕ್‌ ಅಥವಾ ಆರ್‌ಟಿಜಿಎಸ್‌ ಮೂಲಕ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ. 

ಆನ್‌ಲೈನ್‌ನಲ್ಲಿ ಚಿನ್ನಾಭರಣವನ್ನು ಮುಂಗಡವಾಗಿ ಕಾಯ್ದಿರಿಸುವ ಅವಕಾಶವನ್ನು ಮಲಬಾರ್‌ ನೀಡಿದೆ. ಕಾಯ್ದಿರಿಸಲು www.malabargoldanddiamonds.com/advance-bookingಗೆ ಭೇಟಿ ನೀಡಬಹುದು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು