ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಬೆಂಗಳೂರು ಮೆಮು ರೈಲಿನ ವೇಳಾಪಟ್ಟಿ ಬದಲು

Last Updated 15 ಮಾರ್ಚ್ 2019, 3:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು– ಮೈಸೂರು ನಡುವೆ ಸಂಚರಿಸುತ್ತಿದ್ದ ಮೆಮು ರೈಲಿನ (06575 / 06576) ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಇದುವರೆಗೆ ಈ ರೈಲುಗಳು ವಾರಕ್ಕೆ ನಾಲ್ಕು ದಿನಗಳ ಕಾಲ ಸಂಚರಿಸುತ್ತಿದ್ದವು. ಮುಂದೆ ಆರು ದಿನ ಸಂಚರಿಸಲಿವೆ. ಮಾರ್ಚ್‌ 18ರ ಬಳಿಕ ಸೋಮವಾರದಿಂದ ಶನಿವಾರದವರೆಗೆ ಈ ರೈಲುಗಳ ಸಂಚಾರ ಇರಲಿದೆ.

ಬೆಂಗಳೂರಿನಿಂದ ಮೈಸೂರಿಗೆ ತೆರಳುವ ರೈಲು (06575) ನಗರದಿಂದ ಸಂಜೆ 5.20ಕ್ಕೆ ಹೊರಡಲಿದೆ. (ಇದುವರೆಗೆ ಈ ರೈಲು 8.20ಕ್ಕೆ ಹೊರಡುತ್ತಿತ್ತು.) ರಾತ್ರಿ 7.50ಕ್ಕೆ ಮೈಸೂರು ತಲುಪಲಿದೆ. (ಈ ಮೊದಲು 10.40ಕ್ಕೆ ತಲುಪುತ್ತಿತ್ತು)

ಮೈಸೂರಿನಿಂದ ಬೆಂಗಳೂರಿಗೆ ಬರುವ ರೈಲು (06576) ರಾತ್ರಿ 8.30ಕ್ಕೆ ಹೊರಟು 11.35ಕ್ಕೆ ನಗರ ತಲುಪಲಿದೆ. (ಇದುವರೆಗೆ ಈ ರೈಲು ರಾತ್ರಿ 11.05ಕ್ಕೆ ಹೊರಡುತ್ತಿತ್ತು)

ಬೆಂಗಳೂರು ರಾಮನಗರ ನಡುವೆ ಸಂಚರಿಸುತ್ತಿದ್ದ (66539 / 66540) ರೈಲುಗಳನ್ನು ಮಾರ್ಚ್‌ 18ರಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT