‘ನಿರ್ವಹಣೆ ವೆಚ್ಚ ಕಡಿಮೆ ಮಾಡಿ’
ನಮ್ಮ ಮೆಟ್ರೊದಲ್ಲಿ ಹಲವು ಅನಗತ್ಯ ವೆಚ್ಚಗಳಿವೆ. ಅದಕ್ಕೆಲ್ಲ ಕಡಿವಾಣ ಹಾಕಿದರೆ, ನಿರ್ವಹಣೆಯ ಹೆಸರಲ್ಲಿ ಮಾಡುತ್ತಿರುವ ವೆಚ್ಚದಲ್ಲಿ ಪ್ರತಿ ತಿಂಗಳು ₹2 ಕೋಟಿ ಕಡಿಮೆ ಮಾಡಬಹುದು. ಆಗ ಮೆಟ್ರೊ ಪ್ರಯಾಣ ದರವನ್ನು ಏರಿಸಬೇಕಿಲ್ಲ. ಏರಿಕೆ ಮಾಡಲೇಬೇಕಿದ್ದರೆ ₹5ರಿಂದ ₹10ರ ಒಳಗೆ ಏರಿಸಬಹುದು ಎಂದು ಮೆಟ್ರೊ ಎಂಪ್ಲಾಯಿಸ್ ಯೂನಿಯನ್ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ತಿಳಿಸಿದರು.