ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸಂಚಾರ 25 ನಿಮಿಷ ವ್ಯತ್ಯಯ

Last Updated 29 ನವೆಂಬರ್ 2021, 18:01 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ–ದಕ್ಷಿಣ ಎತ್ತರಿಸಿದ ಕಾರಿಡಾರ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿಯಶವಂತಪುರ– ನಾಗಸಂದ್ರ ನಿಲ್ದಾಣಗಳ ನಡುವೆ ‘ನಮ್ಮ ಮೆಟ್ರೊ’ ಸೇವೆ ಸೋಮವಾರ ಮಧ್ಯಾಹ್ನ 25 ನಿಮಿಷಗಳ ಕಾಲ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸಮಸ್ಯೆ ಎದುರಿಸಿದರು.

ಮಧ್ಯಾಹ್ನ 1.10 ನಿಮಿಷಕ್ಕೆ ಯಶವಂತಪುರ– ನಾಗಸಂದ್ರ ನಡುವಿನ ಎತ್ತರಿಸಿದ ಮಾರ್ಗದಲ್ಲಿ ತಾಂತ್ರಿಕ ದೋಷವು ಕಾಣಿಸಿಕೊಂಡಿತು. ಈ ಮಾರ್ಗದ ನಿಲ್ದಾಣಗಳಲ್ಲಿ ಮೆಟ್ರೊಗಾಗಿ ಕಾಯುತ್ತಿದ್ದ ಪ್ರಯಾಣಿಕರು ಬಸ್‌, ಆಟೊರಿಕ್ಷಾ ಅಥವಾ ಕ್ಯಾಬ್‌ಗಳ ಮೊರೆ ಹೋಗಬೇಕಾಯಿತು. ತಾಂತ್ರಿಕ ದೋಷ ಕಾಣಿಸಿಕೊಂಡ ಅವಧಿಯಲ್ಲೂ ಯಶವಂತಪುರ– ರೇಷ್ಮೆ ಸಂಸ್ಥೆ ನಡುವಿನ ಮೆಟ್ರೊ ಮಾರ್ಗಗಳಲ್ಲಿ ರೈಲುಗಳು ಎಂದಿನಂತೆ ಸಂಚರಿಸಿದವು.

ತಾಂತ್ರಿಕ ದೋಷವನ್ನು ಮಧ್ಯಾಹ್ನ 1.35 ಗಂಟೆ ವೇಳೆಗೆ ಸರಿಪಡಿಸಲಾಯಿತು. ನಂತರ ನಾಗಸಂದ್ರ ನಿಲ್ದಾಣದಿಂದ ರೇಷ್ಮೆ ಸಂಸ್ಥೆವರೆಗೂ ಮೆಟ್ರೊ ಸೇವೆ ಪುನರಾರಂಭಗೊಂಡಿತು.

‘ವಿದ್ಯುತ್‌ ಸರ್ಕೀಟ್‌ಗೆ ಸಂಬಂಧಿಸಿದ ಉಪಕರಣವೊಂದು ಕೆಟ್ಟುಹೋಗಿದ್ದರಿಂದ ಮೆಟ್ರೊ ಸೇವೆಯಲ್ಲಿ ಏರುಪೇರಾಯಿತು. ಈ ಉಪಕರಣವನ್ನು ತಕ್ಷಣವೇ ಬದಲಾಯಿಸಿದ್ದೇವೆ. ಆದರೂ 25 ನಿಮಿಷ ಕಾಲ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಯಿತು. ಇದಕ್ಕಾಗಿ ವಿಷಾದಿಸುತ್ತೇವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT