ಸೋಮವಾರ, ಜನವರಿ 20, 2020
27 °C
ಸಾಮಾಜಿಕ ನ್ಯಾಯ ಪರಿಷತ್‌ ಒತ್ತಾಯ

ಹೊಲೆಯ, ಬೋವಿ ಜನಾಂಗಕ್ಕೆ ಸಚಿವ ಸ್ಥಾನ: ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಲೆಯ, ಬೋವಿ, ನಾಯಕ ಜಾತಿಗಳ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಸಾಮಾಜಿಕ ನ್ಯಾಯ ಪರಿಷತ್‌ ಒತ್ತಾಯಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಅಧ್ಯಕ್ಷ ಅನಂತರಾಯಪ್ಪ,‘ದಲಿತರ ಬೆಂಬಲದಿಂದ ದೀರ್ಘಕಾಲದವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷ, ಈ ಮೂರೂ ಉಪಜಾತಿಗಳನ್ನು ಕಡೆಗಣಿಸಿತು. ಬಿ.ಬಸವಲಿಂಗಪ್ಪ, ಕೆ.ಎಚ್‌.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ ಹಾಗೂ ಕೆ.ಎಚ್.ಮುನಿಯಪ್ಪ ಅವರಂತಹ ಅನುಭವಿ ನಾಯಕರಿದ್ದರೂ ಮುಖ್ಯಮಂತ್ರಿ ಸ್ಥಾನ ನೀಡದೆ ಕಡೆಗಣಿಸಿತು’ ಎಂದು ದೂರಿದರು.

‘ದಲಿತ ಸಮುದಾಯದ ಗೋವಿಂದ ಎಂ.ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಬಿಜೆಪಿ ಸರ್ಕಾರ ಬದ್ಧತೆ ತೋರಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಸಮುದಾಯಗಳ ಅಭಿವೃದ್ಧಿ ಗಾಗಿ ಹೊಲೆಯ, ಬೋವಿ ನಾಯಕ ರಿಗೆ ಸಚಿವ ಸ್ಥಾನ ಹಾಗೂ ನಾಯಕ ಜಾತಿಯ ಮುಖಂಡರೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು